ಬೆಳ್ಳಂಬೆಳಿಗ್ಗೆ ಸವದಿ ಮನೆಗೆ ಆಗಮಿಸಿದ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ
ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಬಿಜೆಪಿ ಪಕ್ಷವು ಟಿಕೆಟ್ ನೀಡಿಲ್ಲ. ಹೀಗಾಗಿ ನಾಯಕ ಲಕ್ಷ್ಮಣ ಸವದಿ ಪಕ್ಷದ ವಿರುದ್ಧ ಬೇಸರಗೊಂಡಿದ್ದಾರೆ. ಇದರ ಮಧ್ಯೆ ನಾಯಕನಿಗೆ ಕಾಂಗ್ರೆಸ್ ಗಾಳ ಹಾಕಲು ಮುಂದಾಗಿದೆ.
ಇತ್ತ ಬಿಜೆಪಿ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಇಲ್ಲದ್ದ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಇಂದು ಬೆಳಿಗ್ಗೆ ಕಾಗವಾಡ ಕಾಂಗ್ರೆಸ್ ಅಬ್ಯರ್ಥಿ ರಾಜು ಕಾಗೆ ಲಕ್ಷ್ಮಣ ಸವದಿ ಅವರ ಮನೆಗೆ ತೆರಳಿ ಮಾತನಾಡಿದ್ದಾರೆ. ರಾಜು ಕಾಗೆ ಅವರು ಕೂಡ ಈ ಹಿಂದೆ ಕಾಗವಾಡದ ಬಿಜೆಪಿಯ ಮಾಜಿ ಶಾಸಕರು. ಅವರು ಕೂಡ ಕಾಂಗ್ರೆಸ್ ಸೇರಿದ್ದು, ಲಕ್ಷ್ಮಣ ಸವದಿ ಅವರೊಂದಿಗೆ ಉತ್ತಮ ಸ್ನೇಹ ಇಟ್ಟುಕೊಂಡಿದ್ದಾರೆ. ಸದ್ಯ ಅವರ ಮೂಲಕ ಕಾಂಗ್ರೆಸ್ ಸವದಿಗೆ ಗಾಳ ಹಾಕಿದೆ. ಸವದಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.








