Congress – ಡಬಲ್ ಇಂಜಿನ್ ತಳ್ಳುವ ಇಂಜಿನ್ ಆಗಿದೆಯಲ್ಲವೇ?
ಬೆಂಗಳೂರು : 40 ಪರ್ಸೆಂಟ್ ಕಮಿಷನ್ ಆರೋಪ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಗಳನ್ನು ಮಾಡುತ್ತಾ ಸರಣಿ ಪ್ರಶ್ನಿಗಳನ್ನು ಕೇಳಿದೆ.
ಅಲ್ಲದೆ ಡಬಲ್ ಇಂಜಿನ್ ತಳ್ಳುವ ಇಂಜಿನ್ ಆಗಿದೆಯಲ್ಲವೇ ಎಂದು ಕಾಂಗ್ರೆಸ್ ಕುಟುಕಿದೆ.
ಕಾಂಗ್ರೆಸ್ ತನ್ನ ಟ್ವಿಟ್ಟರ್ ನಲ್ಲಿ.. ಹುದ್ದೆ ಮಾರಾಟದ ಸರ್ಕಾರ ಕೆಎಎಸ್ ಹುದ್ದೆಗಳಿಂದ ಹಿಡಿದು ಗ್ರೂಪ್ ಡಿ ವರೆಗೂ ಹುದ್ದೆಗಳನ್ನು ಭರ್ತಿ ಮಾಡದೆ ಕುಳಿತಿರುವಾಗ ಆಡಳಿತ ಯಂತ್ರ ಕಾರ್ಯ ನಿರ್ವಹಿಸುವುದಾದರೂ ಹೇಗೆ?
ಬಸವರಾಜ ಬೊಮ್ಮಾಯಿ ಅವರೇ, ಮಾಧುಸ್ವಾಮಿಯವರು ಹೇಳಿದಂತೆ ಮ್ಯಾನೇಜ್ ಮಾಡ್ತಿರೋ ತಳ್ಳುವ ಸರ್ಕಾರ ಅಲ್ಲವೇ ನಿಮ್ಮದು? ಡಬಲ್ ಇಂಜಿನ್ ತಳ್ಳುವ ಇಂಜಿನ್ ಆಗಿದೆಯಲ್ಲವೇ ಎಂದು ಪ್ರಶ್ನಿಸಿದೆ.

ಅಲ್ಲದೆ ಬೆಂಗಳೂರಿನಲ್ಲಿನ ರಸ್ತೆ ಅವ್ಯವಸ್ಥೆ ಬಗ್ಗೆ ಟ್ವೀಟ್ ಮಾಡಿ, ಬಿಜೆಪಿಯ #40PercentSarkara ದ ಭ್ರಷ್ಟಾಚಾರದ ಅಸ್ತಿಪಂಜರವು ನರ್ತಿಸುತ್ತಿರುವಾಗ ರಸ್ತೆಗಳು ಸಾವಿನ ಹಾದಿಗಳಾಗಿವೆ.
ಹಾಕಿದ ತೇಪೆ ಕೆಲವೇ ದಿನಗಳಲ್ಲಿ ಕಿತ್ತುಬರುತ್ತಿದೆ ಎಂದರೆ ನಿಮ್ಮ ಸರ್ಕಾರದ ಭ್ರಷ್ಟಾಚಾರದ ನರ್ತನ ಎಷ್ಟಿರಬಹುದು ಬಸವರಾಜ ಬೊಮ್ಮಾಯಿ ಅವರೇ? ಕೇವಲ ರಸ್ತೆ ಗುಂಡಿಗಳನ್ನ ಸರಿಪಡಿಸಲಾಗದವರಿಂದ ಇನ್ಯಾವ ಅಭಿವೃದ್ಧಿ ಸಾಧ್ಯ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.








