Ghula nabi Azad: ಸ್ವಂತ ಪಾರ್ಟಿ ಕಟ್ಟತ್ತಾರಂತೆ ಗುಲಾಂ ನಬಿ ಆಜಾದ್…
ರಾಹುಲ್ ಗಾಂಧಿ ಅವರ ನಾಯಕತ್ವ ಕೌಶಲ್ಯವನ್ನು ತೀವ್ರವಾಗಿ ಟೀಕಿಸಿ ಶುಕ್ರವಾರ ಕಾಂಗ್ರೆಸ್ ಪಕ್ಷ ಮತ್ತು ಪಕ್ಷದ ಸ್ಥಾನಗಳಿಗೆ ರಾಜೀನಾಮೆ ನೀಡಿದ ಹಿರಿಯ ನಾಯಕ ಗುಲಾ ನಬಿ ಆಜಾದ್ ಅವರು ಹೊಸ ಪಕ್ಷವನ್ನು ಸ್ಥಾಪಿಸುತ್ತಾರೆ ಎನ್ನಲಾಗಿದೆ. ಹೌದು ಎನ್ನುತ್ತಿವೆ ಅವರ ಆಪ್ತ ಮೂಲಗಳು.
ಗುಲಾಂ ನಬಿ ಅಜಾದ ಅವರು ತಮ್ಮ ಸ್ವಂತ ನೆಲದಿಂದ (ಜಮ್ಮು ಕಾಶ್ಮೀರ) ಹೊಸ ಪಕ್ಷವನ್ನ ಕಟ್ಟಲು ಬಯಸುತ್ತಾರೆ ಎಂದು ಪ್ರಮುಖ ಪತ್ರಿಕೆಯೊಂದು ಹೇಳಿದೆ. “ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುತ್ತೇನೆ. ಆ ರಾಜ್ಯದಲ್ಲಿ ಸ್ವಂತ ಪಕ್ಷ ಕಟ್ಟುತ್ತೇನೆ. ರಾಷ್ಟ್ರೀಯ ಸಾಧ್ಯತೆಯನ್ನು ನಂತರ ನೋಡುತ್ತೇನೆ’ ಎಂದು ಗುಲಾಂ ನಬಿ ಆಜಾದ್ ಹೇಳಿರುವುದಾಗಿ ಪತ್ರಿಕೆ ಹೇಳಿದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಯಲಿದೆ.
ಗುಲಾಂ ನಬಿ ಆಜಾದ್ ಅವರ ಆಪ್ತ ಮೂಲಗಳು ಪ್ರಕಾರ, ಆಜಾದ್, ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸುವ ಸಾಧ್ಯತೆ ಇದೆ. 73 ವರ್ಷದ ಆಜಾದ್ ಅವರಿಗೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷವು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ಹುದ್ದೆಯನ್ನು ನೀಡಿತು, ಆದರೆ ಅದನ್ನ ನಿರಾಕರಿಸಿದ್ದಾರೆ. ಒಂಬತ್ತು ವರ್ಷಗಳಿಂದ ಎಐಸಿಸಿ ತನ್ನ ಶಿಫಾರಸುಗಳನ್ನು ನಿರ್ಲಕ್ಷಿಸಿದೆ ಎಂದು ಶುಕ್ರವಾರ ತಮ್ಮ ರಾಜೀನಾಮೆ ಪತ್ರದಲ್ಲಿ ಆಜಾದ್ ಟೀಕಿಸಿದ್ದಾರೆ.
ಗುಲಾಂ ನಬಿ ಆಜಾದ್ ತಮ್ಮ ಸುದೀರ್ಘ ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿ ಪಕ್ಷಕ್ಕೆ ಅಪಾರ ಹಾನಿ ಮಾಡಿದ್ದಾರೆ, ರಾಹುಲ್‌ಗೆ ಪ್ರಬುದ್ಧತೆಯ ಕೊರತೆಯಿದೆ ಮತ್ತು ಪಕ್ಷವನ್ನು ರಿಮೋಟ್ ಕಂಟ್ರೋಲ್ ಮೂಲಕ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.








