ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ
ಉತ್ತರ ಪ್ರದೇಶ : ಯೋಗಿ ನಾಡು ಉತ್ತರ ಪ್ರದೇಶದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿದ್ದು, ಚಿತ್ರಕೂಟದ ಪ್ರಸಿದ್ಧಪುರ್ ನಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಅವರ ಸೋದರಳಿಯನನ್ನು ನೆರೆ ಮನೆಯ ವ್ಯಕ್ತಿಯೇ ಗುಂಡಿಕ್ಕಿ ಹತ್ಯೆಗೈದಿದ್ದಾನೆ.
55 ವರ್ಷದ ಅಶೋಕ್ ಪಟೇಲ್ ಮೃತವ್ಯಕ್ತಿಯಾಗಿದ್ದು, ಈತ ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷನಾಗಿದ್ದರು ಅಂತ ತಿಳಿದುಬಂದಿದೆ. ಕೊಲೆ ಆರೋಪಿ ಕಮಲೇಶ್ ಕುಮಾರ್ ಪರಾರಿಯಾಗಿದ್ದಾನೆ.
ಹಳೆ ವೈಷಮ್ಯದ ಹಿನ್ನೆಲೆ ಮಂಗಳವಾರ ರಾತ್ರಿ ಅಶೋಕ್ ರ ಮನೆಗೆ ನುಗ್ಗಿದ ಕಮಲೇಶ್ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಕೃತ್ಯವನ್ನು ತಡೆಯಲು ಬಂದ ಪಟೇಲ್ರ ಸೋದರಳಿಯ ಶುಭಂ ಗುಂಡಿಕ್ಕಿ ಹತ್ಯೆಗೈದಿದ್ದಾನೆ.
ದೇಶದಲ್ಲಿ ಒಂದೇ ದಿನ 21,822 ಪ್ರಕತರಣಗಳು ಪತ್ತೆ, 299 ಮಂದಿ ಬಲಿ
ಇದರಿಂದ ಕೋಪಗೊಂಡ ಪಟೇಲ್ ಕುಟುಂಬಸ್ಥರು ಆರೋಪಿಯ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.
ಸರಿಯಾದ ಸಮಯಕ್ಕೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಸದ್ಯ ಪರಾರಿ ಆಗಿರುವ ಕಮಲೇಶ್ ಕುಮಾರ್ ಪತ್ತೆಗಾಗಿ ತಂಡವೊಂದನ್ನು ರಚಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









