ನೇತ್ರದಾನಕ್ಕೆ ಮುಂದಾದ ಜಮೀರ್ ಅಹಮ್ಮದ್ ಖಾನ್ eye-donate saaksha tv
ಬೆಂಗಳೂರು : ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್ ನಿಧನದ ಬಳಿಕ ರಾಜ್ಯದಲ್ಲಿ ನೇತ್ರದಾನ ಮತ್ತು ರಕ್ತದಾನ ಹೆಚ್ಚಾಗುತ್ತಿದೆ.
ಸ್ವತಃ ನಟ ಶಿವರಾಜಕುಮಾರ್ ಕೂಡ ನಿನ್ನೆ ರಕ್ತದಾನ ಮಾಡುವ ಮೂಲಕ ಮಾದರಿಯಾದರು.
ಇದರ ಮುಂದುವರೆದ ಭಾಗವಾಗಿ ಇದೀಗ ಶಾಸಕ ಜಮೀರ್ ಅಹ್ಮದ್ ಖಾನ್ ಇಂದು ನೇತ್ರದಾನಕ್ಕೆ ಮುಂದಾಗಿದ್ದಾರೆ.
ಮಿಂಟೋ ಆಸ್ಪತ್ರೆಗೆ ತೆರಳಿ ಜಮೀರ್ ಅಹಮ್ಮದ್ ಖಾನ್ ನೇತ್ರದಾನಕ್ಕೆ ಸಹಿ ಹಾಕಿದ್ದಾರೆ.
ಆ ಮೂಲಕ ತಮ್ಮ ಬೆಂಬಲಿಗರಿಗೆ ನೇತ್ರದಾನ ಮಾಡುವಂತೆ ಕರೆಕೊಟ್ಟು ಮಾದರಿಯಾಗಿದ್ದಾರೆ.
ನಿನ್ನೆ ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಜೊತೆಗೆ ನೇತ್ರದಾನ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಈ ವೇಳೆ ಬರೋಬ್ಬರಿ 3,100ಕ್ಕೂ ಹೆಚ್ಚು ಅಭಿಮಾನಿಗಳು ನೇತ್ರದಾನಕ್ಕೆ ಅರ್ಜಿ ಹಾಕುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.