Congress – ಆಪರೇಷನ್ ಕಮಲ ಎಂಬ ಸೋಂಕು ಕರೋನಾಗಿಂತಲೂ ಅಪಾಯಕಾರಿ
ಬೆಂಗಳೂರು : ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಆಪರೇಷನ್ ಕಮಲ ಎಂಬ ಸೋಂಕು ಕರೋನಾಗಿಂತಲೂ ಅಪಾಯಕಾರಿ ಎಂದು ರಾಜ್ಯ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಟಿಆರ್ ಎಸ್ ನ ನಾಲ್ವರು ಶಾಸಕರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ ಆರೋಪದಡಿ ಮೂವರನ್ನ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಇತ್ತ ಶಾಸಕರಿಗೆ ಪಕ್ಷಾಂತರ ಮಾಡಲು ಬಿಜೆಪಿ 100 ಕೋಟಿ ರೂಪಾಯಿ ಆಫರ್ ಕೊಟ್ಟಿತ್ತು ಎಂದು ಟಿಆರ್ ಎಸ್ ಆರೋಪಿಸಿದೆ.
ಈ ಪ್ರಕರಣ ಸಂಬಂಧ ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್, ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಸಿಕ್ಕವರ ತುಳಿಯುತಲಿತ್ತು ಎಂಬ ಬೇಂದ್ರೆಯವರ ಸಾಲಿನಂತೆ ಭ್ರಷ್ಟ ಕಾಂಚಾಣದಿಂದ ಬಿಜೆಪಿಯು ಪ್ರಜಾಪ್ರಭುತ್ವವನ್ನು ಕಾಲಡಿಯಲ್ಲಿ ಹಾಕಿಕೊಂಡು ತುಳಿಯುತ್ತಿದೆ. ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಆಪರೇಷನ್ ಕಮಲ ಎಂಬ ಸೋಂಕು ಕರೋನಾಗಿಂತಲೂ ಅಪಾಯಕಾರಿ ಎಂದು ಆತಂಕ ಹೊರಹಾಕಿದೆ.
ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಬಂದವರಲ್ಲಿ 15 ಕೋಟಿ ಹಣ ದೊರಕಿದೆ, ಅದಲ್ಲದೆ ನೂರಿನ್ನೂರು ಕೋಟಿಗೂ ಅಧಿಕ ಮೊತ್ತದ ವ್ಯವಹಾರ ಅದಾಗಿದೆ.
ಐಟಿ, ಇಡಿಗಳು ಇದುವರೆಗೂ ಆ ಪ್ರಕರಣವನ್ನು ಕೈಗೆತ್ತಿಕೊಂಡಿಲ್ಲವೇಕೆ?
ಆ ಅಕ್ರಮ ಹಣದ ಮೂಲ ಹುಡುಕುವ ಮನಸಿಲ್ಲವೇ?ಐಟಿ, ಇಡಿಗಳಿಗೆ ಬಿಜೆಪಿಯವರ ಮನೆಗೆ ನುಗ್ಗಲು ಭಯವೇ?#BJPKillsDemocracy
— Karnataka Congress (@INCKarnataka) October 27, 2022
ಕರ್ನಾಟಕದಲ್ಲಿ ಶುರುವಾದ ಆಪರೇಷನ್ ಕಮಲ ಎಂಬ ಸೋಂಕು ದೇಶದಾದ್ಯಂತ ಹರಡಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ. ದೇಶಾದ್ಯಂತ ಶಾಸಕರನ್ನು ಖರೀದಿಸಲು ಏಳರಿಂದ ಎಂಟು ಸಾವಿರ ಕೋಟಿ ಖರ್ಚು ಮಾಡಿರುವ ಆರೋಪ ಬಿಜೆಪಿ ಮೇಲಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರದ ನಂತರ ಈಗ ತೆಲಂಗಾಣಕ್ಕೆ ಭ್ರಷ್ಟ ಹಣ ತಲುಪಿದೆ.
ಕರ್ನಾಟಕದಲ್ಲಿ ಶುರುವಾದ ಆಪರೇಷನ್ ಕಮಲ ಎಂಬ ಸೋಂಕು ದೇಶದಾದ್ಯಂತ ಹರಡಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ.
ದೇಶಾದ್ಯಂತ ಶಾಸಕರನ್ನು ಖರೀದಿಸಲು ಏಳರಿಂದ ಎಂಟು ಸಾವಿರ ಕೋಟಿ ಖರ್ಚು ಮಾಡಿರುವ ಆರೋಪ ಬಿಜೆಪಿ ಮೇಲಿದೆ.
ಕರ್ನಾಟಕ, ಗೋವಾ, ಮಹಾರಾಷ್ಟ್ರದ ನಂತರ ಈಗ ತೆಲಂಗಾಣಕ್ಕೆ ಭ್ರಷ್ಟ ಹಣ ತಲುಪಿದೆ.#BJPKillsDemocracy
— Karnataka Congress (@INCKarnataka) October 27, 2022
ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಬಂದವರಲ್ಲಿ 15 ಕೋಟಿ ಹಣ ದೊರಕಿದೆ, ಅದಲ್ಲದೆ ನೂರಿನ್ನೂರು ಕೋಟಿಗೂ ಅಧಿಕ ಮೊತ್ತದ ವ್ಯವಹಾರ ಅದಾಗಿದೆ. ಐಟಿ, ಇಡಿಗಳು ಇದುವರೆಗೂ ಆ ಪ್ರಕರಣವನ್ನು ಕೈಗೆತ್ತಿಕೊಂಡಿಲ್ಲವೇಕೆ? ಆ ಅಕ್ರಮ ಹಣದ ಮೂಲ ಹುಡುಕುವ ಮನಸಿಲ್ಲವೇ? ಐಟಿ, ಇಡಿಗಳಿಗೆ ಬಿಜೆಪಿಯವರ ಮನೆಗೆ ನುಗ್ಗಲು ಭಯವೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.








