ಬೆಂಗಳೂರು: ಕುಮಾರಸ್ವಾಮಿ ವಿರುದ್ಧದ ಪ್ರಕರಣ ಸೇರಿದಂತೆ ಬಾಕಿ ಇರುವ ನಾಲ್ಕು ಪ್ರಕರಣಗಳ ಪ್ರಾಸಿಕ್ಯೂಷನ್ ಗೆ (Prosecution) ಅನುಮತಿಗೆ ಆಗ್ರಹಿಸಿ ಆ.31ರಂದು ರಾಜಭವನಕ್ಕೆ ಕಾಂಗ್ರೆಸ್ ಪರೇಡ್ ನಡೆಸಲು ಸಿದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದ ಗಾಂಧಿ ಪ್ರತಿಮೆ ಬಳಿಯಿಂದ ರಾಜಭವನಕ್ಕೆ ಪಾದಯಾತ್ರೆ ಮಾಡುವುದರ ಮೂಲಕ ಮನವಿ ಮಾಡುತ್ತೇವೆ. ಎಲ್ಲ ಕಾಂಗ್ರೆಸ್ (Congress) ಶಾಸಕರು ಇದರಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ಸಚಿವರು ಇರ್ತಾರೆ, ಸಿಎಂ ಕೂಡ ಭಾಗವಹಿಸುತ್ತಾರೆ.
ಪ್ರಾಸಿಕ್ಯೂಷನ್ ಗೆ ಬಾಕಿ ಇರುವ ಎಲ್ಲ 4 ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು. ಕುಮಾರಸ್ವಾಮಿ ಪ್ರಕರಣ ಅಲ್ಲ, ಎಲ್ಲರ ಬಗ್ಗೆಯೂ ಮನವಿಮಾಡುತ್ತೇವೆ. 150 ಮೀ. ಪಾದಯಾತ್ರೆ, ಟ್ರಾಫಿಕ್ ಗೂ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದ್ದಾರೆ.