ಶಿಕಾರಿಪುರದಲ್ಲಿ ಗಲಾಟೆ ನಡೆದಾಗ ಅಲ್ಲಿ ಇದ್ದೋರೇ ಕಾಂಗ್ರೆಸ್ ನವರು – ಸಿಎಂ ಬಸವರಾಜ್ ಬೊಮ್ಮಾಯಿ…
ಮಾಜಿ ಸಿಎಂ ಬಿಎಸ್ ವೈ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಇದು ಬಿಜೆಪಿ ಕುತಂತ್ರ ಎಂಬ ಡಿ ಕೆ ಶಿವಕುಮಾರ್ ಹೇಳಿಕೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಗರಂ ಆಗಿದ್ದಾರೆ.
ಈ ಕುರಿತು ಮಾತನಾಡಿದ ಸಿ ಎಂ ಬೊಮ್ಮಾಯಿ ಗಲಾಟೆ ನಡೆದಾಗ ಅಲ್ಲಿ ಇದ್ದೋರೇ ಕಾಂಗ್ರೆಸ್ ಕಡೆಯವರು. ಪ್ರಕರಣದಲ್ಲಿ ಸಿಕ್ಕಿ ಬಿದ್ದೋರು ಕಾಂಗ್ರೆಸ್ ಪಾರ್ಟಿಯವರು. ರಾತ್ರಿಯಲ್ಲ ಮೀಟಿಂಗ್ ನಡೆಸಿ ಪಕ್ಕಾ ಪ್ಲಾನ್ ಮಾಡಿದ್ದು ಗೊತ್ತಾಗಿದೆ ಎಂದು ಕಲಬುರಗಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇನ್ನು ಗಲಾಟೆ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ ಶಿಕಾರಿಪುರದ ನಿನ್ನೆಯ ಘಟನೆಯಲ್ಲಿ ಕೆಲವರು ರೌಡಿಶೀಟರ್ ಗಳು ಇದ್ದಾರೆ. ಇದೊಂದು ರಾಜಕೀಯ ಪ್ರೇರಿತ ಗಲಾಟೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಿನ್ನೆ ಘಟನೆಯಲ್ಲಿ ಪೊಲೀಸರು ತಾಳ್ಮೆಯನ್ನು ಮೆರೆದಿದ್ದಾರೆ ಕೆಳಸ್ತರದ ಸಮಾಜ ಬಂಜಾರ ಸಮಾಜ ವಾಗಿದೆ. ಆ ಹಿನ್ನೆಲೆಯಲ್ಲಿ ಆ ಸಮುದಾಯದ ಮೇಲೆ ಏಕಾಏಕಿ ಲಾಟಿ ಉಪಯೋಗಿಸಬಾರದು ಎಂಬ ಕಾರಣಕ್ಕೆ ತಾಳ್ಮೆ ಕಳೆದುಕೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.
Congress people were there when there was a riot in Shikaripura – Basavaraj Bommai…