ಶೇ50 ರಷ್ಟು ಹುದ್ದೆಗಳು 50 ವರ್ಷ ಒಳಗಿನವರಿಗೆ ಮೀಸಲು – ಖರ್ಗೆ….
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ನೂತನವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರನ್ನ ಸೋನಿಯಾ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಎಲ್ಲ ನಾಯಕರು ಅಭಿನಂದಿಸಿದ್ದಾರೆ. ಕಾಂಗ್ರೆಸ್ ನಾಯಕರನ್ನುದ್ದೇಶಿಸಿ ಮಾತನಾಡಿದ ಖರ್ಗೆ, “ಸಾಮಾನ್ಯ ಕಾರ್ಯಕರ್ತನನ್ನ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಧನ್ಯವಾದಗಳು. ಇದು ನನ್ನ ಪಾಲಿಗೆ ಭಾವನಾತ್ಮಕ ಕ್ಷಣ. ಸೋನಿಯಾ ಗಾಂಧಿ ಅವರು ಪಕ್ಷವನ್ನು ಶ್ರದ್ಧೆಯಿಂದ ನಿಭಾಯಿಸಿದ್ದಾರೆ. ನಾನೂ ಕೂಡ ಕಷ್ಟಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.” ಎಂದಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಶೇ 50ರಷ್ಟು ಹುದ್ದೆಗಳನ್ನು 50 ವರ್ಷದೊಳಗಿನ ನಾಯಕರಿಗೆ ಮೀಸಲಿಡುವುದಾಗಿ ಘೋಷಿಸಿದರು.
ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ಇಂದಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನವ ಭಾರತದಲ್ಲಿ ಉದ್ಯೋಗವಿಲ್ಲ. ದೇಶದಲ್ಲಿ ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ. ಸರಕಾರ ನಿದ್ರಿಸುತ್ತಿದೆ. ಇಡಿ ಮತ್ತು ಸಿಬಿಐ ಮೂಲಕ ಜನರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇಂದಿನ ರಾಜಕೀಯದಲ್ಲಿ ಸುಳ್ಳುಗಳೇ ಪ್ರಧಾನವಾಗಿದೆ ಎಂದು ಟೀಕಿಸಿದ್ದಾರೆ.
ಸೋನಿಯಾ ಗಾಂಧಿ ಕ ಅಭಿನಂದನೆ.
ಖರ್ಗೆ ಅವರನ್ನು ಅಭಿನಂದಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ”ಪಕ್ಷದ ನೂತನ ಅಧ್ಯಕ್ಷ ಖರ್ಗೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಧ್ಯಕ್ಷರಾಗಿ ಆಯ್ಕೆಯಾದವರು ಅನುಭವಿ ಮತ್ತು ಡೌನ್ ಟು-ಆರ್ತ್ ನಾಯಕರು ಎಂಬುದು ಅತ್ಯಂತ ತೃಪ್ತಿಕರ ಸಂಗತಿ. ಸರಳ ಕೆಲಸಗಾರನಾಗಿ ದುಡಿಯುತ್ತಿರುವ ಇವರು ತಮ್ಮ ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವದಿಂದ ಈ ಎತ್ತರಕ್ಕೆ ತಲುಪಿದ್ದಾರೆ ಎಂದಿದ್ದಾರೆ.
Congress President: 50% of the posts are reserved for those below 50 years – Kharge….







