Congress-president race | ದಕ್ಷಿಣಾಧಿಪತಿಗೆ ಕಾಂಗ್ರೆಸ್ ಸಾರಥ್ಯ
ನವದೆಹಲಿ : ದಕ್ಷಿಣಾಧಿಪತಿಗೆ ಕಾಂಗ್ರೆಸ್ ಸಾರಥ್ಯ..! ಬರೋಬ್ಬರಿ ಇಪ್ಪತ್ತು ವರ್ಷಗಳ ಬಳಿಕ ಕಾಂಗ್ರೆಸ್ ಗೆ ಗಾಂಧಿಯೇತರ ನಾಯಕ..! ರೇಸ್ ನಲ್ಲಿದ್ದಾರೆ ಘಟಾನುಘಟಿ ನಾಯಕರು..!
ಹೌದು..! 2019ರ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೀಯ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ರು.
ಅಂದಿನಿಂದ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ಮತ್ತೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವಂತೆ ರಾಹುಲ್ ಗಾಂಧಿಗೆ ಹಲವು ನಾಯಕರು ಮನವಿ ಮಾಡಿಕೊಂಡಿದ್ದಾರೆ.
ಆದ್ರೆ ಆ ಎಲ್ಲಾ ಮನವಿಗಳನ್ನು ರಾಗಾ ತಿರಸ್ಕರಿಸಿ ತಮ್ಮದೇಯಾದ ಹಾದಿಯಲ್ಲಿ ನಡೆಯುತ್ತಿದ್ದಾರೆ.
2022ರಲ್ಲಿ ಪಕ್ಷದೊಳಗೆ ಸಾಂಸ್ಥಿಕ ಸುಧಾರಣೆಗಳನ್ನು ಕೋರಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ 23 ಮಂದಿ ನಾಯಕರು ಪತ್ರ ಬರೆದಿದ್ದರು.
ರಾಹುಲ್ ನಡೆಯಿಂದ ಬೇಸತ್ತು ಈಗಾಗಲೇ ಸಾಕಷ್ಟು ಹಿರಿಯ ನಾಯಕರು ಪಕ್ಷವನ್ನು ತೊರೆದಿದ್ದಾರೆ.
ಪಕ್ಷದೊಳಗೆ 60 ದಾಟಿರುವವರೇ ಹೆಚ್ಚಿರುವುದರಿಂದ ರಾಹುಲ್ ಗಾಂಧಿ ಅವರೊಂದಿಗೆ ಸಮನ್ವಯ ಇಲ್ಲದಂತಾಗಿದೆ. ಇದು ಪದೇ ಪದೇ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡುತ್ತಿದೆ.
ಇದರ ಜೊತೆಗೆ ದೇಶದಲ್ಲಿ ಕೊನೆಯುಸಿರಿನಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಪ್ರಾಣವಾಯು ತುಂಬವ ನಾಯಕನ ಅವಶ್ಯಕತೆ ಇದೆ.
ಮುಂದೆ ಲೋಕಸಭಾ ಚುನಾವಣೆ ಸೇರಿದಂತೆ ಸಾಲು ಸಾಲು ಚುನಾವಣೆಗಳು ಬರಲಿವೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷನ ಅವಶ್ಯಕತೆ ಹೆಚ್ಚಾಗಿದೆ.
ಇದನ್ನ ಅರಿತಿರುವ ಕಾಂಗ್ರೆಸ್ ನಾಯಕರು, ಅಕ್ಟೋಬರ್ 17 ರಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಅಕ್ಟೋಬರ್ 15 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿದೆ. 19ಕ್ಕೆ ರಿಸಲ್ಟ್ ಬರಲಿದೆ.
ಹಾಗಾದ್ರೆ ರೇನ್ ನಲ್ಲಿರುವವರು ಯಾರು ?
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿದ್ದು, ಮತ್ತೆ ಅಧ್ಯಕ್ಷ ಸ್ಥಾನಕ್ಕೇರುವ ಮನಸ್ಸಿನಲ್ಲಿಲ್ಲ. ಇತ್ತ ಪ್ರಿಯಾಂಕಾ ಗಾಂಧಿ ಕೂಡ ಅಧ್ಯಕ್ಷಗಿರಿಯಿಂದ ದೂರ ಇರಲು ನಿರ್ಧಾರ ಮಾಡಿದ್ದಾರೆ.
ಈ ನಡುವೆ ಗಾಂಧಿಯೇತರರಿಗೆ ಈ ಬಾರಿ ಮಣೆ ಹಾಕಬೇಕು ಎಂದು ನಿರ್ಧರಿಸಿದ್ದು, ಕಾಂಗ್ರೆಸ್ ಅಧ್ಯಕ್ಷೀಯ ರೇಸ್ ನಲ್ಲಿ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಂಸದ ಶಶಿ ತರೂರ್, ಮಲ್ಲಿಕಾರ್ಜುನ್ ಖರ್ಗೆ ಹೆಸರು ಕೇಳಿ ಬರುತ್ತಿದೆ.
ಮೂಲಗಳ ಪ್ರಕಾರ ಈ ಬಾರಿ ದಕ್ಷಿಣದ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷಗಿರಿ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಯಾಕೆಂದರೇ ಸೋನಿಯಾ ಗಾಂಧಿ ಅವರೊಂದಿಗೆ ಶಶಿ ತರೂರ್ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಅಲ್ಲದೇ ಶಶಿ ತರೂರ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಒಟ್ಟಾರೆ ಚುನಾವಣೆಗಳು ಹತ್ತಿರವಾಗುತ್ತಿರುವುದರಿಂದ ಕಾಂಗ್ರೆಸ್ ನಲ್ಲಿ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿವೆ. ಆದ್ರೆ ಇದು ಎಲ್ಲಿಗೆ ಬಂತು ನಿಲ್ಲುತ್ತೆ ಎಂಬೋದನ್ನ ಕಾದು ನೋಡಬೇಕಾಗಿದೆ.