ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್ ಖರ್ಗೆ..
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಖರ್ಗೆ ಉಮೇದುವಾರಿಕೆಯನ್ನು ಪಕ್ಷದ ಮುಖಂಡರಾದ ಅಶೋಕ್ ಗೆಹ್ಲೋಟ್, ಪ್ರಮೋದ್ ತಿವಾರಿ, ಪಿಎಲ್ ಪುನಿಯಾ, ಎಕೆ ಆಂಟನಿ, ಪವನ್ ಕುಮಾರ್ ಬನ್ಸಾಲ್ ಮತ್ತು ಮುಕುಲ್ ವಾಸ್ನಿಕ್ ಬೆಂಬಲಿಸಿದ್ದಾರೆ.
ಜಿ 23 ನಾಯಕರಾದ ಆನಂದ್ ಶರ್ಮಾ ಮತ್ತು ಮನೀಶ್ ತಿವಾರಿ ಕೂಡ ಖರ್ಗೆ ಅವರ ಉಮೇದುವಾರಿಕೆಗೆ ಬೆಂಬಲ ನೀಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅವರು ಪಕ್ಷದ ಅತ್ಯಂತ ಅನುಭವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ದಲಿತ ನಾಯಕರೂ ಆಗಿದ್ದಾರೆ ಎಂದು ತಿವಾರಿ ಹೇಳಿದರು.
ಪಕ್ಷದ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ಬದಲಿಗೆ ತಮ್ಮ ಹಿರಿಯ ಖರ್ಗೆ ಅವರ ಉಮೇದುವಾರಿಕೆಯನ್ನು ಪ್ರಸ್ತಾಪಿಸುವುದಾಗಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಶುಕ್ರವಾರ ಘೋಷಿಸಿದ್ದಾರೆ.
ಈ ಮೂಲಕ ಖರ್ಗೆ ಮತ್ತು ಶಶಿ ತರೂರ್ ನಡುವೆ ನೇರ ಹಣಾಹಣಿ ನಡೆಯಲಿದೆ.
Congress president: Senior Congress leader Mallikarjun Kharge on Friday filed his nomination for the post of party president.








