ಶಶಿ ತರೂರ್ ಅಥವಾ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಹೇಗಿರುತ್ತೆ ? ಓದಿ…
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಕಣದಲ್ಲಿ ಕೇರಳದ ತಿರುವನಂತಪುರಂ ಸಂಸದ ಶಶಿ ತರೂರ್ ಮತ್ತು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇರ ಹಣಾಹಣಿ ಎದುರಿಸುತ್ತಿದ್ದಾರೆ.
ಪ್ರಸ್ತುತ ಪಕ್ಷ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ. ಈ ಮೂಲಕ ಪಕ್ಷಕ್ಕೆ ಎರಡು ದಶಕಗಳ ನಂತರ ಗಾಂಧಿ ಕುಟುಂಬದೇತರ ಅಧ್ಯಕ್ಷರು ಸಿಗಲಿದ್ದಾರೆ.
“ನಾನು ಮತ್ತು ಖರ್ಗೆ ಸಹೋದ್ಯೋಗಿಗಳು ಯಾರೋ ಒಬ್ಬರು ಗೆಲ್ಲುತ್ತಾರೆ, ಆದರೆ ಪಕ್ಷ ಗೆಲ್ಲುತ್ತದೆ ಎಂದು ಶಶಿ ತರೂರ್ ಹೇಳಿದ್ದಾರೆ. ಇತ್ತ ಖರ್ಗೆಯವರು ತರೂರ್ ಅವರನ್ನು ತಮ್ಮ ಕಿರಿಯ ಸಹೋದರ ಎಂದು ಬಣ್ಣಿಸಿದ್ದಾರೆ ಮತ್ತು ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ್ದಾರೆ.
ಶಶಿ ತರೂರ್ ಅವರು ಚುನಾವಣೆಯಲ್ಲಿ ತಮ್ಮ ಆದ್ಯತೆಗಳ ಕುರಿತಂತೆ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ದಾರೆ. ಆದರೆ, ಮಲ್ಲಿಕಾರ್ಜುನ್ ಖರ್ಗೆ ಅವರು ಉದಯಪುರ ಪ್ರಣಾಳಿಕೆಯ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದಾರೆ.
ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಯಾವುದೇ ವಿಶೇಷ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿಲ್ಲ. ಉದಯಪುರ ಘೋಷಣೆಯನ್ನು ಜಾರಿಗೊಳಿಸುವುದೊಂದೇ ಅಜೆಂಡಾ ಎಂದು ಹೇಳಿದ್ದಾರೆ. ಮೇ 2022 ರಲ್ಲಿ ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ಚಿಂತನ್ ಶಿವರ್ ಅನ್ನು ಆಯೋಜಿಸಿತ್ತು. ಮೂರು ದಿನಗಳ ಕಾಲ ನಡೆದ ಅನುಭವಿಗಳ ಚರ್ಚೆಯಲ್ಲಿ ಪಕ್ಷಕ್ಕೆ ರಣತಂತ್ರ ಸಿದ್ಧಪಡಿಸಲಾಗಿದೆ. ಆದರೆ, ಚುನಾವಣೆಯಲ್ಲಿ ಗೆದ್ದರೆ ಪಕ್ಷದ ಶೇ.50 ರಷ್ಟು ಹುದ್ದೆಗಳನ್ನು 50 ವರ್ಷದೊಳಗಿನವರಿಗೆ ನೀಡುವುದಾಗಿ ಖರ್ಗೆ ಭರವಸೆ ನೀಡಿದ್ದಾರೆ.
ಎಲ್ಲರನ್ನು ಕರೆದುಕೊಂಡು ಹೋಗುವುದರಲ್ಲಿ ನನಗೆ ನಂಬಿಕೆ ಇದೆ. ರೈತರು, ಕಾರ್ಮಿಕರು, ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು ಮತ್ತು ಸಣ್ಣ ಉದ್ಯಮಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು 80 ವರ್ಷ ವಯಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಹೆಚ್ಚುತ್ತಿರುವ ನಿರುದ್ಯೋಗ, ರೂಪಾಯಿ ಕುಸಿತ, ಏರುತ್ತಿರುವ ದರಗಳು ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ವಿರುದ್ಧವೂ ಹೋರಾಡಲಿವೆ ಎಂದು ಅವರು ಹೇಳಿದರು.
ತರೂರ್ ಚಿಂತನೆಗಳು…
ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಪಕ್ಷದಲ್ಲಿ ಬದಲಾವಣೆಯಾಗುವ ಭರವಸೆಯನ್ನ ತರೂರ್ ನೀಡುತ್ತಿದ್ದಾರೆ. ವಿಶೇಷವಾಗಿ ನಾಯಕತ್ವದ ಮಟ್ಟದಲ್ಲಿ ಹೊಸ ಮುಖಗಳನ್ನು ಮತ್ತು ಯುವಕರನ್ನು ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸಬೇಕಾಗಿದೆ ಎಂದು ತರೂರ್ ಸಲಹೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಿಗೆ ಕಾಂಗ್ರೆಸ್ ನಿಜವಾದ ಅಧಿಕಾರವನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.
Congress president: What will the Congress look like under Shashi Tharoor or Mallikarjun Kharge