ರಾಜಸ್ಥಾನಕ್ಕೆ ನೂತನ ಸಿಎಂ ಖಚಿತ – ಯಾರು ಎನ್ನುವುದೇ ಸಸ್ಪೆನ್ಸ್…
ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೋ ಇಲ್ಲವೋ ಎಂಬ ಸಸ್ಪೆನ್ಸ್ ಹಾಗೇ ಉಳಿದಿದೆ. ಇತ್ತ ರಾಜಸ್ಥಾನದಲ್ಲಿ ಪೈಲಟ್ ಮುಖ್ಯಮಂತ್ರಿಯಾಗುತ್ತಾರಾ ಎನ್ನುವುದೂ ಅನುಮಾನದಲ್ಲಿದೆ. ಆದರೆ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಬದಲಾಗುವುದು ಮಾತ್ರ ಬಹುತೇಕ ಖಚಿತವಾಗಿದೆ. ಸದ್ಯದಲ್ಲೇ ರಾಜಸ್ಥಾನಕ್ಕೆ ಹೊಸ ಸಿಎಂ ಸಿಗಲಿದ್ದಾರೆ ಎಂದು ಕಾಂಗ್ರೆಸ್ ಹೈಕಮಾಂಡ್ ಆಪ್ತ ಹಾಗೂ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ದೆಹಲಿ ತಲುಪಿದ್ದು, ಅಲ್ಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ.
ಜೈಪುರ ಮತ್ತು ದೆಹಲಿ ನಡುವೆ ನಡೆಯುತ್ತಿರುವ ರಾಜಕೀಯ ಪ್ರವಾಸದ ನಡುವೆ ಕೇರಳದ ಮಲಪ್ಪುರಂನಲ್ಲಿ ವೇಣುಗೋಪಾಲ್ ಅವರು ರಾಜಸ್ಥಾನಕ್ಕೆ ಶೀಘ್ರದಲ್ಲೇ ಹೊಸ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು. ”ರಾಜಸ್ಥಾನದಲ್ಲಿ ನಾಟಕ ಇಲ್ಲ. ಇನ್ನೆರಡು ದಿನದಲ್ಲಿ ಎಲ್ಲವೂ ಸ್ಪಷ್ಟವಾಗಲಿದ್ದು, ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ತಿಳಿಯಲಿದೆ.” ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಬಿಡುಬಿಟ್ಟ ಪೈಲಟ್, ಗೆಹ್ಲೋಟ್
ಸಚಿನ್ ಪೈಲಟ್ ಎರಡು ದಿನಗಳಿಂದ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಬುಧವಾರ ರಾತ್ರಿ ರಾಷ್ಟ್ರ ರಾಜಧಾನಿಗೆ ಬಂದಿಳಿದಿದ್ದಾರೆ. ಗೆಹ್ಲೋಟ್ ಅವರು ಇಂದು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಯೋಜನೆಗೆ ಗೆಹ್ಲೋಟ್ ಮತ್ತೊಮ್ಮೆ ಮುಂದಾಗಬಹುದು ಎಂಬ ಚರ್ಚೆ ನಡೆಯುತ್ತಿದೆ.
Congress: Rajasthan is going to get a new CM, Venugopal’s announcement, tension for whom, good news for whom








