ನಾನು- ನಾವು-ಪಕ್ಷ ಎಂಬ ಹಗ್ಗ-ಜಗ್ಗಾಟದ ಹೊರತಾಗಿ JDS ಭದ್ರಕೋಟೆ ಹಾಸನದಲ್ಲಿ ಇಂದು ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಯಲಿದೆ. ಈ ಜನ ಕಲ್ಯಾಣ ಸಮಾವೇಶದಲ್ಲಿ CM ಸಿದ್ದರಾಮಯ್ಯ, DCM ಡಿಕೆಶಿ, ಸಚಿವರು, ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ. ಆರಂಭದಲ್ಲಿ ಇದನ್ನು ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಎಂದೇ ಹೇಳಲಾಗಿತ್ತು. ಇದರಲ್ಲಿ ಸರ್ಕಾರ & ಪಕ್ಷದ ಯಾವ ಪಾತ್ರವೂ ಇಲ್ಲ ಎಂದು ಅವರ ಆಪ್ತರು ಘೋಷಿಸಿದ್ದರು ಕೂಡ, ಆದರೆ ಈ ನಡುವೆ ಮಧ್ಯಪ್ರವೇಶಿಸಿದ್ದ AICC ಈ ಸಮಾವೇಶವನ್ನು ಪಕ್ಷದ ಬ್ಯಾನರ್ ಅಡಿಯಲ್ಲೇ ನಡೆಸಬೇಕೆಂದು ಖಡಕ್ ಆಗಿ ಸೂಚಿಸಿತ್ತು.
ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ
ರಾಜ್ಯದ ಅನ್ನದಾತರಿಗೆ ಮುಂಗಾರು ಹಂಗಾಮಿನ ಸಮಯದಲ್ಲಿ ಎದುರಾಗುತ್ತಿದ್ದ ಬಹುದೊಡ್ಡ ಸಮಸ್ಯೆಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಉದ್ದೇಶಪೂರ್ವಕವಾಗಿ...








