ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ಹೃದಯಾಘಾತದಿಂದ ನಿಧನ
ಹೊಸದಿಲ್ಲಿ, ಅಗಸ್ಟ್ 12: ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ಹೃದಯಾಘಾತದಿಂದ ಬುಧವಾರ ಗಾಜಿಯಾಬಾದ್ ನ ಅವರ ನಿವಾಸದಲ್ಲಿ ನಿಧನರಾದರು. ರಾಷ್ಟ್ರೀಯ ಪಕ್ಷವು ತನ್ನ ನಾಯಕನ ನಿಧನದ ಬಗ್ಗೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.
ಶ್ರೀ ರಾಜೀವ್ ತ್ಯಾಗಿ ಅವರ ನಿಧನದಿಂದ ನಾವು ತುಂಬಾ ದುಃಖಿತರಾಗಿದ್ದೇವೆ. ಅವರು ಒಬ್ಬ ನಿಜವಾದ ಕಾಂಗ್ರೆಸ್ಸಿಗರಾಗಿದ್ದರು. ದುಃಖದ ಈ ಸಮಯದಲ್ಲಿ ನಮ್ಮ ಪ್ರಾರ್ಥನೆಗಳು ಅವರ ಕುಟುಂಬಗಳು ಮತ್ತು ಸ್ನೇಹಿತರೊಂದಿಗೆ ಇವೆ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮುಂಬೈನಲ್ಲಿ ಮಾಧ್ಯಮಗಳನ್ನು ನಿರ್ವಹಿಸಲು ಅವರನ್ನು ನಿಯೋಜಿಸಲಾಗಿತ್ತು.