ಕಾಂಗ್ರೇಸ್ ನವರು ಬೀದಿ ನಾಟಕ ಮಾಡುತ್ತಿದ್ದಾರೆ: ಡಾ. ಕೆ. ಸುದಾಕರ Saaksha Tv
ಬೆಂಗಳೂರು: ಕಾಂಗ್ರೇಸ್ ನವರು ಬೀದಿ ನಾಟಕ ಮಾಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾದಿಂದ ಕೊರೊನಾ ತುರ್ತು ಪರಿಸ್ಥಿತಿ ಉಂಟಾಗಿದೆ. ಇವರು ಮಾಡುವ ಪಾದಯಾತ್ರೆಯಿಂದ ಕೊರೊನಾ ಜಾಸ್ತಿ ಆಗುತ್ತದೆ ಎಂದು ಡಾ. ಕೆ ಸುಧಾಕರ ಹೇಳಿದರು.
ಕಾಂಗ್ರೆಸ್ ಮಾಡುತ್ತಿರುವ ಮೇಕೆದಾಟು ಪಾದಯಾತ್ರೆ ಕುರಿತು ನಗರದ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ. ಸುದಾಕರ ಚುನಾವಣೆಗೋಸ್ಕರ ಕಾಂಗ್ರೆಸ್ ನವರು ಬೀದಿ ನಾಟಕವನ್ನು ಶುರುಮಾಡಿದ್ದಾರೆ. ಇದು ಖೇದರದ ಸಂಗತಿ. ಕಾಂಗ್ರೇಸ್ ನವರ ಪಾದಯಾತ್ರೆ ಕಾವೇರಿ ನದಿಗೆ ಮಾಡುತ್ತಿರುವ ಅವಮಾನ. ಇದಕ್ಕೆ ನನ್ನ ದಿಕ್ಕಾರವಿದೆ ಎಂದು ವಾಗ್ದಾಳಿ ನಡೆಸಿದರು.
ಇವರು ಐದು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದರು. ಮೇಕೆದಾಟುಗೆ ಯೋಜನೆ ಅನುಷ್ಠಾನಗೊಂಡರೆ ಅದು ಬಿಜೆಪಿಯಿಂದ ಮಾತ್ರ. ಅದರಲ್ಲೂ ಬೊಮ್ಮಾಯಿ ಸರ್ಕಾರದಿಂದ ಮಾತ್ರ. ರಾಜ್ಯದಲ್ಲಿ ಹೆಚ್ಚುತ್ತರುವ ಕೊರೊನಾ ಪ್ರಕರಣಗಳು ಸುಳ್ಳು ಎಂದು ಹೇಳುತ್ತಿದ್ದಿರಿ. ಮಹಾರಾಷ್ಟ್ರದಲ್ಲಿರೊದು ನಿಮ್ಮದೆ ಸರಕಾರ ಅಲ್ಲಿ ಅಷ್ಟೊಂದು ಕೇಸ್ ಗಳು ಬರುತ್ತಿದೆಯಲ್ಲಾ ಹಾಗಾದರೆ ಅದು ಸುಳ್ಳಾ. ನಾವೇನಾದರೂ ಕೇಸ್ ಜಾಸ್ತಿ ಮಾಡಿ ಅಂದಿವಾ ಎಂದು ಟಾಂಗ್ ನೀಡಿದರು.









