ಗ್ಯಾಸ್ ಸಿಲಿಂಡರ್ ವಿತರಣೆಗೆ ಗ್ರಾಹಕರು ವಿತರಣಾ ಶುಲ್ಕ ಪಾವತಿಸಬೇಕಾಗಿಲ್ಲ – ಎಚ್ಪಿಸಿಎಲ್
ಹೈದರಾಬಾದ್, ಜನವರಿ04: ಗ್ಯಾಸ್ ಸಿಲಿಂಡರ್ ವಿತರಿಸುವ ವ್ಯಕ್ತಿಗಳಿಗೆ ಗ್ರಾಹಕರು ವಿತರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಮಾಹಿತಿ ಹಕ್ಕು (ಆರ್ಟಿಐ) ಅರ್ಜಿಗೆ ಉತ್ತರಿಸಿದೆ.

ಮನೆಗೆ ಗ್ಯಾಸ್ ಸಿಲಿಂಡರ್ ತಂದು ಕೊಡುವ ಡೆಲಿವರಿ ಬಾಯ್ ಗಳು ಸಿಲಿಂಡರ್ ಹಣದ ಜೊತೆಗೆ ಹೆಚ್ಚುವರಿಯಾಗಿ ಡೆಲಿವರಿ ಚಾರ್ಜ್ ಕೇಳುತ್ತಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮಾಹಿತಿ ನೀಡಿದೆ.
ಬ್ರಿಟನ್ ವೈರಸ್ ಆತಂಕದ ನಡುವೆ ದೇಶದಲ್ಲಿ ಮತ್ತೊಂದು ಸೋಂಕಿನ ಭೀತಿ – ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ
ಬಿಲ್ ನಲ್ಲಿ ನಮೂದಿಸಿದ ಮೊತ್ತವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸದೆ, ಗ್ಯಾಸ್ ಸಿಲಿಂಡರ್ ಅನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದು ಅನಿಲ ವಿತರಕರ ಜವಾಬ್ದಾರಿಯಾಗಿದೆ ಎಂದು ಎಚ್ಪಿಸಿಎಲ್ ತನ್ನ ಉತ್ತರದಲ್ಲಿ ತಿಳಿಸಿದೆ.

ಗ್ಯಾಸ್ ಸಿಲಿಂಡರ್ ವಿತರಿಸಿದ ನಂತರ ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಕೇಳಿದಾಗ ಹೈದರಾಬಾದ್ ನಿವಾಸಿ ಕರೀಮ್ ಅನ್ಸಾರಿ ಅವರು ಆರ್ಟಿಐ ಸಲ್ಲಿಸಿದ್ದರು.
ಡೆಲಿವರಿ ಬಾಯ್ ಗಳು ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಬೇಡಿಕೆ ಇಟ್ಟರೆ, ಗ್ರಾಹಕರು ನಿರಾಕರಿಸಬಹುದು ಎಂದು ಎಚ್ಪಿಸಿಎಲ್ ಹೇಳಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಕೆಂಪು ಅಥವಾ ಹಸಿರು ಸೇಬಿನಲ್ಲಿ ಯಾವುದು ದೇಹಕ್ಕೆ ಹೆಚ್ಚು ಆರೋಗ್ಯಕರ ? https://t.co/mSnRwFInex
— Saaksha TV (@SaakshaTv) January 3, 2021
ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿhttps://t.co/RRXmUiWJeg
— Saaksha TV (@SaakshaTv) January 3, 2021








