Kalaburagi | ಬಸ್ಸಿಗೆ ಬೆಂಕಿ : ಹಲವರ ಸಜೀವ ದಹನ ಶಂಕೆ!
ಕಮಲಾಪುರ ತಾಲೂಕಿನ ಮುಖ್ಯರಸ್ತೆಯಲ್ಲಿ ಘಟನೆ
ಲಾರಿಗೆ ಡಿಕ್ಕಿ ಹೊಡೆದು ಬಸ್ಸಿಗೆ ಬೆಂಕಿ
ವೋಲ್ವೊ ಬಸ್ಸಿಗೆ ಬೆಂಕಿ, ಹಲವರು ಸಜೀವ ದಹನ
ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕಲಬುರಗಿ : ಬಸ್ಸಿಗೆ ಬೆಂಕಿ ಬಿದ್ದು ಹಲವರು ಸಜೀವವಾಗಿ ದಹನಗೊಂಡಿರುವ ಘಟನೆ ಕಲಬುರಗಿಯ ಕಮಲಾಪುರ ತಾಲೂಕಿನ ಮುಖ್ಯರಸ್ತೆಯಲ್ಲಿ ನಡೆದಿದೆ.
ಹೈದರಾಬಾದ್ ಕಡೆ ಹೋಗುತ್ತಿದ್ದ ವೋಲ್ವೋ ಬಸ್ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ.
ಬಸ್ಸಿನಲ್ಲಿ 29 ಜನ ಪ್ರಯಾಣಿಸುತ್ತಿದ್ದರು. ಇದರಲ್ಲಿ 22 ಜನರನ್ನು ರಕ್ಷಣೆ ಮಾಡಲಾಗಿದ್ದು, ಇನ್ನುಳಿದವರು ಸಜೀವ ದಹನಗೊಂಡಿದ್ದಾರೆ.
ಇನ್ನು ಬಸ್ಸಿನಲ್ಲಿ 9ಕ್ಕೂ ಹೆಚ್ಚು ಮಕ್ಕಳಿದ್ದರು ಎಂದು ತಿಳಿದುಬಂದಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಕಮಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.