ಬೆಂಗಳೂರಿಗರೇ ಗಮನಿಸಿ : ಜೂ.21 ರ ಬಳಿಕವೂ ನೈಟ್ ಕರ್ಫ್ಯೂ ಮುಂದುವರಿಕೆ
ಬೆಂಗಳೂರು : ರಾಜ್ಯದಲ್ಲಿ ಜೂನ್ 21 ಅಂದರೇ ಸೋಮವಾರದಿಂದ ಅನ್ ಲಾಕ್ 2.0 ಪ್ರಕ್ರಿಯೆ ಆರಂಭವಾಗಲಿದ್ದು. ಬೆಂಗಳೂರಿನಲ್ಲಿ ಜೂನ್ 21ರ ನಂತರವೂ ವಾರಾಂತ್ಯ ಕಫ್ರ್ಯೂ, ರಾತ್ರಿ ಕಫ್ರ್ಯೂ ಮುಂದುವರೆಯಲಿದೆ ಎಂದು ಬಿಬಿಎಂಪಿ ಹೇಳಿದೆ.
ಅಲ್ಲದೆ ಎರಡನೇ ಹಂತದ ಅನ್ ಲಾಕ್ ನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಶೇ.50ರಷ್ಟು ಪ್ರಯಾಣಿಕರೊಂದಿಗೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಮೊದಲ ಹಂತದಲ್ಲಿ ಕೈಗಾರಿಕೆಗಳು ಮತ್ತು ಉತ್ಪಾದನಾ ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು.
ಇದೀಗ ಜೂ.21ರಂದು ಎರಡನೇ ಹಂತದ ಲಾಕ್ಡೌನ್ ಸಡಿಲಿಕೆಯಾಗಲಿದ್ದು, ವಾಣಿಜ್ಯ ಉದ್ಯಮಗಳು ಮತ್ತು ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಸಿಗಲಿದೆ. ಕ್ರಮೇಣ ಪರಿಸ್ಥಿತಿ ಆಧರಿಸಿ ಉಳಿದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶನಿವಾರ ಮತ್ತು ಭಾನುವಾರ ವಾರಾಂತ್ಯ ಕಫ್ರ್ಯೂ ಮುಂದುವರೆಯಲಿದ್ದು, ವಾರಾಂತ್ಯ ಕಫ್ರ್ಯೂ ಸಂದರ್ಭದಲ್ಲಿ ಜನರು ಯಾರು ಅನಗತ್ಯವಾಗಿ ಓಡಾಡಬಾರದು. ಈ ಹಿಂದೆ ಇದ್ದಂತೆಯೇ ಈ ಕಫ್ರ್ಯೂ ಕೂಡ ಇರಲಿದೆ.









