ರಾಜ್ಯದಲ್ಲಿ ಮುಂದುವರಿದ ಕೊರೊನಾ ಸ್ಫೋಟ- ಒಂದೇ ದಿನ 1839 ಮಂದಿಗೆ ಕೊರೊನಾ ದೃಢ
ಬೆಂಗಳೂರು, ಜುಲೈ 5: ರಾಜ್ಯದಲ್ಲಿ ಕೊರೊನಾ ಸ್ಫೋಟ ಮುಂದುವರಿದಿದ್ದು, ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆಯ ವರೆಗೆ 1839 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಇಲ್ಲಿಯವರೆಗೆ ಪತ್ತೆಯಾದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 21,549 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 1172 ಜನರಿಗೆ ಕೊರೊನಾ ಸೋಂಕು ದೃಢಪಡುವ ಮೂಲಕ ರಾಜ್ಯ ರಾಜಧಾನಿ ಕೊರೊನಾ ಹಾಟ್ಸ್ಪಾಟ್ ಆಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8345 ಕ್ಕೆ ಏರಿಕೆಯಾಗಿದ್ದು ಇದರಲ್ಲಿ 7250 ಸಕ್ರಿಯ ಪ್ರಕರಣಗಳು. ಸಿಲಿಕಾನ್ ಸಿಟಿಯಲ್ಲಿ 129 ಮಂದಿ ಕೊರೊನಾಗೆ ಬಲಿಯಾಗಿದ್ದರೆ, 226 ಮಂದಿ ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದ್ದು, ಸಾವಿರದ ಸನಿಹವಿದ್ದ ಸಂಖ್ಯೆ ಇದೀಗ ಸಾವಿರದ ಗಡಿಯನ್ನು ದಾಟಿದೆ
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆಯ ವರೆಗೆ ದೃಢಪಟ್ಟ ಕೊರೊನಾ ಸೋಂಕಿತರ ಸಂಖ್ಯೆ
ಬೆಂಗಳೂರು ನಗರ – 1172, ದಕ್ಷಿಣ ಕನ್ನಡ – 75, ಬಳ್ಳಾರಿ – 73, ಬೀದರ್ – 51, ಧಾರವಾಡ – 45, ರಾಯಚೂರು – 41, ಮೈಸೂರು – 38, ಕಲಬುರ್ಗಿ ಮತ್ತು ವಿಜಯಪುರ – 37, ಮಂಡ್ಯ ಮತ್ತು ಉತ್ತರ ಕನ್ನಡ – 35, ಶಿವಮೊಗ್ಗ – 31, ಹಾವೇರಿ – 28, ಬೆಳಗಾವಿ – 27, ಹಾಸನ – 25, ಉಡುಪಿ – 18, ಚಿಕ್ಕಬಳ್ಳಾಪುರ ಮತ್ತು ತುಮಕೂರು – 12, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ – 11, ದಾವಣಗೆರೆ – 07, ಚಾಮರಾಜನಗರ – 05, ಗದಗ – 04, ಕೊಪ್ಪಳ ಮತ್ತು ಚಿಕ್ಕಮಗಳೂರು – 03, ರಾಮನಗರ – 02, ಯಾದಗಿರಿ – 01