ಕೊರೊನಾ ….ಕೊರೊನಾ…ಕೊರೊನಾ ಸದ್ಯ ದೇಶ – ವಿದೇಶದಲ್ಲಿ ಕೊರೊನಾಸುರನದ್ದೆ ಆರ್ಭಟ. ಭಾರತ ದೇಶ ಇದರಿಂದ ಹೊರತಲ್ಲ. ದೇಶದಲ್ಲಿ ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಮಾಡಲಾಗಿದೆ. ಲಾಕ್ ಡೌನ್ ತೆರವುಗೊಳ್ಳಲು ಇನ್ನೂ ಒಂದೇ ವಾರ ಭಾಕಿ ಇದೆ. ಆದರೆ ಕೊರೊನಾ ಸೋಂಕು ಹರಡುವಿಕೆ ಮಾತ್ರ ಕಡಿಮೆ ಆಗಿಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಲಾಕ್ ಡೌನ್ ನಿಂದ ದೇಶ ಮತ್ತು ರಾಜ್ಯದ ಜನ ಸುಸ್ತಾಗಿದ್ದಾರೆ. ಜೊತೆಗೆ ಲಾಕ್ ಡೌನ್ ಎಪ್ರಿಲ್ 14 ಕ್ಕೆ ಅಂತ್ಯ ಆಗುತ್ತಾ ? ಅಥವಾ ಮುಂದುವರೆಯುತ್ತಾ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಲಾಕ್ ಡೌನ್ ಬಗ್ಗೆ ನಡೆಯುತ್ತಿರುವ ಈ ಚರ್ಚೆಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ,ಲಾಕ್ ಡೌನ್ ಮುಂದುವರೆಸದಂತೆ ಮಾಡುವುದು ಜನರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ
https://www.facebook.com/708459142535886/posts/2833138536734592/








