Bagalkot | ಗುತ್ತಿಗೆ ನೌಕರ ಆತ್ಮಹತ್ಯೆ
ಬಾಗಲಕೋಟೆ : ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಗುತ್ತಿಗೆ ಆಧಾರಿತ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯ ಮುಧೋಳದಲ್ಲಿ ನಡೆದಿದೆ.
42 ವರ್ಷದ ಬಸಣ್ಣ ಪಟ್ಟೇದ ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆ ನೌಕರರಾಗಿದ್ದಾರೆ.
ಬಸಣ್ಣ ಅವರು ಮುಧೋಳ ತಾಲೂಕಿನ ಪಂಚಾಯಿತಿ ಆವರಣದ ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಸಣ್ಣ ಅವರು ರಾಯಚೂರು ಜಿಲ್ಲೆ ಮೂಲದವರಾಗಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಹತ್ತು ವರ್ಷದಿಂದ ಮುಧೋಳ ತಾಲೂಕು ಪಂಚಾಯಿತಿಯಲ್ಲಿ ಬಸಣ್ಣ ಕೆಲಸ ಮಾಡುತ್ತಿದ್ದರು.