ಮತಾಂತರ ನಿಷೇಧ ಕಾಯ್ದೆ | ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದ ಸುಮಲತಾ
ಮಂಡ್ಯ : ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಈ ಮಧ್ಯೆ ಮಂಡ್ಯ ಸಂಸದೆ ಸುಮಲತಾ ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಿರ್ಧಾರ ಕೈಗೊಂಡರುವುದು ಸ್ವಾಗತಾರ್ಹ.
ಮೊದಲಿಂದಲೂ ಈ ಮತಾಂತರ ನಡೆಯುತ್ತಿದೆ. ಬಲವಂತವಾಗಿ ಮತಾಂತರ ಮಾಡುವುದು ತಪ್ಪು.
ಸ್ವ ಇಚ್ಚೆಯಿಂದ ಬೇರೆ ಧರ್ಮಕ್ಕೆ ಹೋದ್ರೆ ಅದರಲ್ಲಿ ನಾವು ಹೇಳುವುದಕ್ಕೆ ಹಾಗಲ್ಲ.
ಕಾಯ್ದೆಯಲ್ಲಿ ಏನಿದೆ ಅನ್ನೊದನ್ನ ಮೊದಲು ತಿಳಿದುಕೊಳ್ಳಬೇಕು. ಕಾಯ್ದೆಯಲ್ಲಿ ಮತಾಂತರ ಹಾಗಬಾರದು ಅಂತ ಇಲ್ಲ.
ಬಲವಂತವಾಗಿ ಮತಾಂತರ ಮಾಡಬಾರದು ಅನ್ನುವುದು ಇದೆ. ಇದನ್ನ ನಾನು ನಂಬುತ್ತೇನೆ ಎಂದರು.
ಇದೇ ವೇಳೆ ನೈಟ್ ಕರ್ಫ್ಯೂ ಜಾರಿ ವಿಚಾರವಾಗಿ ಮಾತನಾಡಿ, ಸರ್ಕಾರ ಈ ರೀತಿಯ ಆದೇಶ ನೀಡಬೇಕಾದ್ರೆ, ತಜ್ಞರ ಸಲಹೆ ಪಡೆದು ಮಾಡಿರ್ತಾರೆ.
ಯಾವ ಕಾರಣಕ್ಕೆ ನೈಟ್ ಕರ್ಫ್ಯೂ ವಿಧಿಸಿದ್ದಾರೆ ನನಗೆ ಗೊತ್ತಿಲ್ಲ. ಸಿಟಿ ಗಳಲ್ಲಿ ಅದರ ಅಗತ್ಯ ಇದೆ.
ನ್ಯೂ ಇಯರ್ ನಲ್ಲಿ ಹೆಚ್ಚು ಜನ ಸೇರುವುದರಿಂದ ಹೆಚ್ಚು ಕೊರೊನಾ ಸ್ಫೋಟ ಆಗಬಹುದು.
ಆ ದೃಷ್ಟಿಯಿಂದ ಕರ್ಫ್ಯೂ ಜಾರಿ ಮಾಡಿರಬಹುದು. ಎಲ್ಲರ ಹಿತ ರಕ್ಷಣೆಗಾಗಿ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ ಎಂದು ತಿಳಿಸಿದರು.