ಮಹಾರಾಷ್ಟ್ರ ಸಹಕಾರ ಸಚಿವ ಬಾಲಾಸಾಹೇಬ್ ಪಾಟೀಲ್ ಗೆ ಕೊರೋನ ಸೋಂಕು
ಮುಂಬೈ, ಅಗಸ್ಟ್ 16: ಮಹಾರಾಷ್ಟ್ರ ಸಹಕಾರ ಸಚಿವ ಬಾಲಾಸಾಹೇಬ್ ಪಾಟೀಲ್ ಅವರಿಗೆ ಕೊರೋನವೈರಸ್ ಸೋಂಕು ದೃಢಪಟ್ಟಿದ್ದು, ಕರಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಟೀಲ್ ಕಚೇರಿ ಹೊರಡಿಸಿದ ಹೇಳಿಕೆಯ ಪ್ರಕಾರ, ಎನ್‌ಸಿಪಿ ನಾಯಕ ಬಾಲಾಸಾಹೇಬ್ ಅವರಿಗೆ ಶುಕ್ರವಾರ ರಾತ್ರಿ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರನ್ನು ಕರಾದ್‌ನ ಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಚಿವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿದ್ದಾರೆ.ಯಾರೂ ಕೂಡ ಚಿಂತಿಸಬೇಕಾಗಿಲ್ಲ ಎಂದು ಪಾಟೀಲ್ ಅವರ ಮಗ ಹೇಳಿದ್ದಾರೆ.
ಸತಾರಾದ ರಕ್ಷಕ ಮಂತ್ರಿಯೂ ಆಗಿರುವ ಪಾಟೀಲ್, ಇತ್ತೀಚೆಗೆ ಅವರೊಂದಿಗೆ ಸಂಪರ್ಕಕ್ಕೆ ಬಂದ ಜನರನ್ನು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಕನಿಷ್ಠ ಒಂದು ವಾರ ಪ್ರತ್ಯೇಕವಾಗಿರಿ ಎಂದು ಮನವಿ ಮಾಡಿದ್ದಾರೆ.








