ಅಮೆರಿಕ : ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದರೂ, ಮಾಸ್ಕ್ ಧರಿಸಲೇ ಭಂಡತನ ತೋರಿದ್ದ ಡೊನಾಲ್ಡ್ ಟ್ರಂಪ್ ಕೊನೆಗೂ ಹೆಮ್ಮಾರಿಗೆ ಹೆದರಿಸಿದ್ದಾರೆ. ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದರೂ ಮಹಾಮಾರಿ ವೈರಸ್ ಬಗ್ಗೆ ನಿರ್ಲಕ್ಷ್ಯ ತೋರಿದ್ದ ಟ್ರಂಪ್, ಎಲ್ಲಿಯೂ ಮಾಸ್ಕ್ ಧರಿಸಿರಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ಮಾಸ್ಕ್ ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಆರೋಗ್ಯ ಅಧಿಕಾರಿಗಳ ಸೂಚನೆಯ ಮೇರೆಗೆ ಡೊನಾಲ್ಡ್ ಟ್ರಂಪ್, ಶನಿವಾರ ಮಿಲಟರಿ ಅಸ್ಪತ್ರೆಗೆ ಮಾಸ್ಕ್ ಧರಿಸಿ ಭೇಟಿ ನೀಡಿದ್ದಾರೆ. ಟ್ರಂಪ್ ಧರಿಸಿರುವ ಮಾಸ್ಕ್ ಮೇಲೆ ಅಮೆರಿಕಾ ಅಧ್ಯಕ್ಷರ ಮುದ್ರೆಯನ್ನು ಹಾಕಲಾಗಿತ್ತು. ಈ ಬಗ್ಗೆ ಮಾತನಾಡಿದ ಅವರು, ‘ಮಾಸ್ಕ್ ಧರಿಸುವುದು ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ. ನಾನು ಎಂದಿಗೂ ಮಾಸ್ಕ್ ವಿರುದ್ಧ ಇರಲಿಲ್ಲ. ಆದರೆ ಅದಕ್ಕೆ ಸಮಯ ಮತ್ತು ಸ್ಥಳವಿದೆ ಎಂದು ನಾನು ನಂಬುತ್ತೇನೆ’ ಎಂದು ಟ್ರಂಪ್ ಹೇಳಿದರು.







