ತುಮಕೂರು : ಸಚಿವ ಜೆ.ಸಿ ಮಾಧುಸ್ವಾಮಿ ಅವರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗೆ ಮಾಧುಸ್ವಾಮಿ ಅವರ ಕಾರು ಚಾಲಕ ಮತ್ತು ಮನೆಯ ಅಡುಗೆ ಕೆಲಸದ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.
ಇದನ್ನೂ ಓದಿ : ಬಿಜೆಪಿಯನ್ನು ಕಿತ್ತೊಗೆಯುವವರೆಗೂ ನಾವು ಸುಮ್ಮನೆ ಕೂರಬಾರದು : ಕೃಷ್ಣಬೈರೇಗೌಡ
ಈ ಕಾರಣ ಸಚಿವರು ಕೂಡ ಕೊರೊನಾ ಟೆಸ್ಟ್ ಗೆ ಒಳಗಾಗಿದ್ದರು.
ಭಾನುವಾರ ಅವರ ಕೋವಿಡ್ ವರದಿ ಪಾಸಿಟಿವ್ ಎಂದು ಬಂದಿದೆ.
ಈ ಹಿನ್ನೆಲೆ ಅವರು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.








