ಮುಂಬೈ: ಷೇರು ಮಾರುಕಟ್ಟೆ ಮೇಲೆ ಕಿಲ್ಲರ್ ಕೊರೊನಾ ಎಫೆಕ್ಟ್ ಮುಂದುವರಿದಿದ್ದು, ವಹಿವಾಟು ಆರಂಭವಾದ ಬಳಿಕ ಕೇವಲ 1 ನಿಮಿಷದಲ್ಲಿ ಬರೋಬ್ಬರಿ 12 ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ಇದು ಹೂಡಿಕೆದಾರರಲ್ಲಿ ಆತಂಕ ಹೆಚ್ಚಿಸಿದೆ. ಇವತ್ತು ಷೇರು ಮಾರುಕಟ್ಟೆಗೆ ಆರಂಭಿಕ ಆಘಾತವಾಗಿದ್ದು, ಸರ್ವಕಾಲಿಕ ಕುಸಿತ ಕಂಡಿದೆ.
ಸೆನ್ಸೆಕ್ಸ್ 3200ಕ್ಕೂ ಹೆಚ್ಚು ಪಾಯಿಂಟ್ಸ್ ಇಳಿಕೆ ಕಂಡಿದ್ದು, ನಿಫ್ಟಿ ಸೂಚ್ಯಂಕ 900 ಪಾಯಿಂಟ್ಸ್ ಇಳಿಕೆಯಾಗಿದೆ. ದಿನದ ಆರಂಭದಲ್ಲೇ ತೀವ್ರ ಕುಸಿತ ಕಂಡಿರುವುದರಿಂದ ಬಿಎಸ್ ಇ ವಹಿವಾಟನ್ನು 45 ನಿಮಿಷ ಕಾಲ ಹಾಗೂ ನಿಫ್ಟಿ ವಹಿವಾಟನ್ನು 1 ಗಂಟೆ ಕಾಲ ಸ್ಥಗಿತಗೊಳಿಸಲಾಗಿದೆ.
ಮೂರು ದಿನಗಳಲ್ಲಿ 30 ಲಕ್ಷ ಕೋಟಿ ಲಾಸ್!
ಮಹಾಮಾರಿ ಕೊರೊನಾ ಸೋಂಕಿನಿಂದಾಗಿ ಕಳೆದ ಮೂರು ದಿನಗಳಿಂದ ಒಟ್ಟು 30 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ನಿನ್ನೆಯಷ್ಟೇ 1 ಗಂಟೆಗೆ 11 ಲಕ್ಷ ಕೋಟಿ ಲಾಸ್ ಆಗಿತ್ತು. ಕಳೆದ 2 ದಿನಗಳ ಹಿಂದೆ 7 ಲಕ್ಷ ಕೋಟಿ ನಷ್ಟ ಅನುಭವಿಸಿತ್ತು.








