ಕೊಪ್ಪಳ: ಕೊಪ್ಪಳದಲ್ಲಿ ಇಂದು ಕೊರೊನಾ ಸ್ಫೋಟವಾಗಿದ್ದು ಒಂದೇ ದಿನ 98 ಹೊಸ ಕೊರೊನಾ ಪಾಸಿಟಿವ್ ಕೇಸ್ ಗಳು ಧೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1194ರ ಗಡಿ ತಲುಪಿದೆ. ಹೊಸ ಪಾಸಿಟಿವ್ ಕೇಸ್ ಗಳ ಪೈಕಿ ಗಂಗಾವತಿ ತಾಲೂಕಿನಲ್ಲಿ 53, ಕುಷ್ಟಗಿಯಲ್ಲಿ 17, ಕೊಪ್ಪಳ ತಾಲೂಕಿನಲ್ಲಿ 27 , ಯಲಬುರ್ಗಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ. ಇನ್ನೂ ಇಂದು ಇಬ್ಬರು ಮೃತಪಟ್ಟಿದ್ದು, ಈವರೆಗೂ ಮಹಾಮಾರಿಗೆ ಜಿಲ್ಲೆಯಲ್ಲಿ ಒಟ್ಟು 26 ಜನರು ಬಲಿಯಾಗಿದ್ದಾರೆ. ಇಂದು ಒಟ್ಟು ಜಿಲ್ಲೆಯಲ್ಲಿ 68 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೂ ಗುಣಮುಖರಾದವರ ಸಂಖ್ಯೆ 757ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಮಾಹಿತಿ ನಿಡಿರುವ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು, ಜಿಲ್ಲೆಯಲ್ಲಿ ಈವರೆಗೂ ಒಟ್ಟು 24,960 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ಜನರ ವರದಿ ಬಂದಿದೆ. ಇನ್ನುಳಿದಂತೆ 958 ಜನರ ಲ್ಯಾಬ್ ವರದಿ ಬರಬೇಕಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಬಿರುಕು: ಅತೃಪ್ತ ನಾಯಕರ ‘ಬಣ’ ಕದನ
ಕರ್ನಾಟಕದ ಬಿಜೆಪಿ ಘಟಕದಲ್ಲಿ ಬಣ ರಾಜಕೀಯ ಮತ್ತೆ ಮುಂದುವರೆದಿದೆ. ಪಕ್ಷದೊಳಗಿನ ಅತೃಪ್ತ ನಾಯಕರು ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ನಿವಾಸದಲ್ಲಿ ಸಭೆ ಸೇರಿದ್ದು, ಈ ಸಭೆ ಹಲವು...