ಬಳ್ಳಾರಿ : ಬಳ್ಳಾರಿಯಲ್ಲಿ ಇಂದು 418 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 24,915 ಕ್ಕೆ ಏರಿಕೆಯಾಗಿದೆ. ಇನ್ನೂ ಜಿಲ್ಲೆಯಲ್ಲಿ ಕೊರೊನಾಗೆ ಇಂದು 8 ಜನ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 315 ಕ್ಕೆ ಏರಿದೆ.
ಇನ್ನೂ ಈವರೆಗೂ 20,621 ಜನ ಕೊವಿಡ್ ನಿಂದ ಗುಣಮುಖರಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳು 3979ರ ಗಡಿ ತಲುಪಿದೆ. ಹೊಸದಾಗಿ ಪತ್ತೆಯಾದ ಸೋಂಕಿತರ ಪೈಕಿ ಬಳ್ಳಾರಿ 93, ಸಂಡೂರು 57, ಸಿರುಗುಪ್ಪ 67, ಕೂಡ್ಲಿಗಿ 41, ಹಡಗಲಿ 46, ಹೊಸಪೇಟೆ 60, ಹಗರಿಬೊಮ್ಮನಹಳ್ಳಿ 27, ಹರಪನಹಳ್ಳಿ 22, ಅಂತರರಾಜ್ಯ 1, ಅಂತರ್ ಜಿಲ್ಲೆತಯಲ್ಲಿ 4 ಜನರಿಗೆ ಸೋಂಕು ತಗುಲಿರುವುದು ವರದಿಯಾಗಿದೆ.