ನವದೆಹಲಿ: ಕೊರೊನಾ ಸಂಕಷ್ಟದ ನಡುವೆ ದೇಶದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಿದ್ದು, ಅನೇಕ ಉದ್ಯಮಗಳಿಗೆ ಹೊಡೆತ ಬಿದ್ದಿದೆ. ಹೀಗಾಗಿ ಕೇಂದ್ರ ಸರ್ಕಾರ ವ್ಯಾಪಾರಿಗಳಿಗೆ ಮತ್ತು ಉದ್ಯಮಿಗಳಿಗೆ ದೊಡ್ಡ ಮಟ್ಟದ ರಿಲೀಫ್ ನೀಡುವ ಘೋಷಣೆ ಮಾಡಿದೆ.
ವಾರ್ಷಿಕ 40 ಲಕ್ಷ ರೂಪಾಯಿಯಷ್ಟು ವ್ಯಾಪಾರ, ವಹಿವಾಟು ಹೊಂದಿರುವ ಉದ್ಯಮಿಗಳು ಅಥವಾ ವ್ಯಾಪಾರಸ್ಥರಿಗೆ ಜಿಎಸ್ ಟಿ ವಿನಾಯ್ತಿ ನೀಡಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಅಲ್ಲದೇ ಈ ಯೋಜನೆಯಡಿ ವಾರ್ಷಿಕ ವಹಿವಾಟು ಅಂದಾಜು 1. 5ಕೋಟಿ ರೂಪಾಯಿವರೆಗೆ ಹೊಂದಿದವರಿಗೆ ಕೇವಲ ಶೇ.1ರಷ್ಟು ತೆರಿಗೆ ಪಾವತಿಸಬಹುದಾಗಿದೆ ಎಂದು ಕೇಂದ್ರ ತಿಳಿಸಿದೆ.









