“ಲಾಕ್ ಡೌನ್ ಜಾರಿ ಆಗದಿದ್ದರೇ ಕೊರೊನಾ ಕಂಟ್ರೊಲ್ ಆಗಲ್ಲ”
ಕೊಡಗು : ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ಗೆ ಲಾಕ್ ಡೌನ್ ಜಾರಿ ಆಗಲೇಬೇಕಿದೆ. ಇಲ್ಲದಿದ್ದರೇ ಸೋಂಕು ಅತೋಟಿಗೆ ಬರೋದಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಅನಿವಾರ್ಯ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಕೊಡಗಿನ ವಿರಾಜಪೇಟೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ಆಗಬೇಕಿದೆ, ಇಲ್ಲದಿದ್ದರೆ ಸೋಂಕು ಹರಡುವುದು ಕಂಟ್ರೋಲ್ ಆಗೊಲ್ಲ. ‘ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ.
ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕಿದೆ. ಶೀಘ್ರದಲ್ಲೇ ಕೇಂದ್ರದಿಂದ ಸೂಚನೆ ಸಿಗಲಿದೆ. ಕರ್ನಾಟಕವನ್ನ ಡೇಂಜರಸ್ ರೆಡ್ ಏರಿಯಾ ಎಂದು ಗುರುತಿಸಲಾಗುತ್ತೆ ಎಂದು ಹೇಳಿದರು.










