ಕೊರೋನಾ ವೈರಸ್ ಸೋಂಕು ಇಡೀ ವಿಶ್ವವನ್ನೇ ಲಾಕ್ ಡೌನ್ ಮಾಡಿದ್ದು, ಪ್ರತಿಯೊಬ್ಬರು ಸ್ವಯಂ ದಿಗ್ಬಂಧನದಲ್ಲಿ ಇರಬೇಕಾದ ಅನಿವಾರ್ಯತೆ ಇದೆ. ಈ ಮಧ್ಯೆ ರ್ಯಾಪರ್ ಚಂದನ್ ಶೆಟ್ಟಿ ತಮ್ಮ ವಿಭಿನ್ನ ಶೈಲಿಯಲ್ಲಿ ರ್ಯಾಪ್ ಗೀತೆಯನ್ನು ರಚಿಸಿದ್ದು, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಸೇರಿಕೊಂಡು ತಾವೇ ರಚಿಸಿದ ಹಾಡನ್ನು ಹೇಳಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರ್ಯಾಪ್ ಸಾಂಗ್ ಮೂಲಕ ಜನರಿಗೆ ಕೊರೋನಾ ಬಗ್ಗೆ ತಿಳಿ ಹೇಳಿದ್ದಾರೆ.
https://www.instagram.com/tv/B-RtIAVlql7/








