ಪುತ್ತೂರಿನಲ್ಲಿ ಇಂದು ಖಾಸಗಿ ಆಸ್ಪತ್ರೆಯ ವೈದ್ಯೆ ಸೇರಿ ಮೂವರಿಗೆ ಕೊರೊನಾ ದೃಢ
ಪುತ್ತೂರು, ಜುಲೈ 19: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಭಾನುವಾರದ ಬೆಳಗ್ಗಿನ ಬುಲೆಟಿನ್ ನಲ್ಲಿ ಮೂರು ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಪುತ್ತೂರಿನ ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪುತ್ತೂರಿನ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯರ ಪತ್ನಿಯಾಗಿರುವ ಇವರಿಗೆ ಸೋಂಕು ತಗುಲಿರುವುದು ಜನರಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ.
ಭಾನುವಾರದ ಬೆಳಗ್ಗಿನ ಬುಲೆಟಿನ್ ನ ಪ್ರಕಾರ ಪುತ್ತೂರಿನ ನರಿಮೊಗರು ಗ್ರಾಮ ನಿವಾಸಿ 45 ವರ್ಷದ ಮಹಿಳೆ ಮತ್ತು ಬನ್ನೂರು ಕರ್ಮಲ ನಿವಾಸಿ 48 ವರ್ಷದ ಮಹಿಳೆ ಸೇರಿದಂತೆ ಒಟ್ಟು ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಪುತ್ತೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.