IPL ಮೇಲೆ ಕರೋನಾ ಕರಿನೆರಳು – ಡೆಲ್ಲಿ ತಂಡದ ಆಟಗಾರನಿಗೆ ಕೋವಿಡ್ ಪಾಸಿಟೀವ್ …
2022ರ IPL ಮೇಲೆ ಮತ್ತೊಮ್ಮೆ ಕರೋನಾದ ಕರಿ ನೆರಳು ಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ನಂತರ, ಮಿಚೆಲ್ ಮಾರ್ಷ್ ಅವರಿಗೆ ಕೂಡ ಕರೋನಾ ವರದಿಯಲ್ಲಿ ಪಾಸಿಟೀವ್ ಕಂಡುಬಂದಿದೆ ಎನ್ನಲಾಗುತ್ತಿದೆ. ಇದಾದ ಬಳಿಕ ಡೆಲ್ಲಿ ತಂಡ ಪುಣೆ ಪ್ರಯಾಣಿಸುವುದನ್ನ ನಿಲ್ಲಿಸಿದೆ. ತಂಡವನ್ನು ಮುಂಬೈನಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಕ್ಯಾಪಿಟಲ್ಸ್ ಮುಂದಿನ ಪಂದ್ಯವನ್ನು ಏಪ್ರಿಲ್ 20 ರಂದು ಪುಣೆಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಬೇಕಾಗಿತ್ತು. ಈ ಪಂದ್ಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನ ಇದುವರೆಗೂ ತೆಗೆದುಕೊಂಡಿಲ್ಲ.
ದೆಹಲಿ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹತ್ ನಂತರ ವಿದೇಶಿ ಆಟಗಾರನಿಗೆ ರ್ಯಾಪಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತವಾಗಿ ಆಟಗಾರನ ಹೆಸರನ್ನ ಇಲ್ಲಿಯವರೆಗೂ ಬಹಿರಂಗಪಡಿಸಿಲ್ಲ. ಏಪ್ರಿಲ್ 16 ರಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಮುಂಚೆಯೇ, ಡೆಲ್ಲಿ ಕ್ಯಾಪಿಟಲ್ಸ್ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಕರೋನಾ ಪಾಸಿಟಿವ್ ಗೆ ತುತ್ತಾಗಿದ್ದರು. ಇವರನ್ನ ಹೊರತುಪಡಿಸಿ, ಯಾವುದೇ ಆಟಗಾರನ ಕರೋನಾ ತುತ್ತಾಗಿರಲಿಲ್ಲ. ಇದಾದ ಬಳಿಕ ಎಪ್ರಿಲ್ 16ರಂದು ದೆಹಲಿ ತಂಡ ಬೆಂಗಳೂರು ವಿರುದ್ಧ ಕಣಕ್ಕಿಳಿದಿತ್ತು. ಇದೀಗ ಒಬ್ಬ ಆಟಗಾರ ಕೂಡ ಪಾಸಿಟಿವ್ ಆಗಿದ್ದು, ಆತನ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.
ಕಳೆದ ವರ್ಷ ಏಪ್ರಿಲ್-ಮೇನಲ್ಲಿ ನಡೆದ ಐಪಿಎಲ್ 14 ನೇ ಸೀಸನ್‌ನಲ್ಲಿ 3 ತಂಡಗಳ 4 ಆಟಗಾರರು, 2 ಕೋಚ್‌ಗಳು ಮತ್ತು ಇಬ್ಬರು ಇತರ ಸಿಬ್ಬಂದಿಗಳು ಕರೋನಾಗೆ ತುತ್ತಾಗಿದ್ದರು. ಆಗ 29 ಪಂದ್ಯಗಳ ನಂತರ ಐಪಿಎಲ್ ಅನ್ನೇ ಸ್ಥಗಿತಗೊಳಿಸಲಾಗಿತ್ತು. ಉಳಿದ 31 ಪಂದ್ಯಗಳನ್ನು ಅಕ್ಟೋಬರ್‌ನಲ್ಲಿ ಯುಎಇಯಲ್ಲಿ ಆಡಲಾಗಿತ್ತು.
ಮೊದಲನೆಯದಾಗಿ, ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ ಸೇರಿದಂತೆ ಇಬ್ಬರು ಆಟಗಾರರು ಕರೋನಾಗೆ ತುತ್ತಾಗಿದ್ದರು. ನಂತರ ಕೋಲ್ಕತ್ತಾ ಮತ್ತು ಬೆಂಗಳೂರು ನಡುವಿನ ಪಂದ್ಯವನ್ನು ಮುಂದೂಡಲಾಯಿತು. ಕೆಕೆಆರ್ ಪಂದ್ಯದ ನಂತರ, ಡೆಲ್ಲಿ ಕ್ಯಾಪಿಟಲ್ಸ್‌ನ ಇಡೀ ತಂಡವನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರ ನಂತರ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್‌ನ ಮೂವರು ಸದಸ್ಯರು ಸಹ ಕರೋನಾಗೆ ತುತ್ತಾಗಿದ್ದರು.
ಇದಾದ ನಂತರ ಸನ್‌ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಹಾ ಕೂಡ ಕೊರೊನಾ ಪಾಸಿಟಿವ್ ಗೆ ಒಳಗಾಗಿದ್ದರು. ನಂತರ ದೆಹಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ ಗೆ ಪಾಸಿಟೀವ್ ಬಂದಿತ್ತು. ಇವರಲ್ಲದೆ, ದೆಹಲಿಯ ಕೆಲವು ಕ್ರೀಡಾಂಗಣದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿತ್ತು. ನಂತರ ಐಪಿಎಲ್ ಅನ್ನು ನಿಲ್ಲಿಸಲಾಯಿತು.








