ಪುತ್ತೂರು, ಬೆಟ್ಟಂಪಾಡಿಯ ಇಬ್ಬರ ಸಹಿತ ದಕ್ಷಿಣ ಕನ್ನಡದಲ್ಲಿ 32 ಮಂದಿಗೆ ಕೊರೊನಾ ಪತ್ತೆ
ಮಂಗಳೂರು, ಜೂನ್ 30: ದಕ್ಷಿಣ ಕನ್ನಡದಲ್ಲಿ ಜೂನ್ 29ರಂದು 32 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಮಂಗಳೂರಿನ ಮಹಿಳೆಯೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
ಪುತ್ತೂರು ನಗರಸಭೆಯಲ್ಲಿ ಕಸ ವಿಲೇವಾರಿ ವಾಹನದಲ್ಲಿ ಚಾಲಕನಿಗೆ ಕರ್ತವ್ಯ ನಿರ್ವಹಿಸುತ್ತಿದ್ದ 47 ವರ್ಷದ ಬೆಟ್ಟಂಪಾಡಿ ಕಕ್ಕೂರು ನಿವಾಸಿ ಮತ್ತು ಅಸೌಖ್ಯದಿಂದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ತೆಂಕಿಲದ 23 ವರ್ಷದ ಯುವತಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 32 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೆಟ್ಟಂಪಾಡಿ, ತೆಂಕಿಲ, ಕಲ್ಲಂದಡ್ಕದ 3 ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 705 ಕ್ಕೆ ಏರಿಕೆಯಾಗಿದೆ.
ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ನ್ಯೂಮೋನಿಯಾದಿಂದ ಬಳಲುತ್ತಿದ್ದ ಮಂಗಳೂರಿನ 49 ವರ್ಷದ ಮಹಿಳೆ ಜೂನ್ 29 ರಂದು ಚಿಕಿತ್ಸೆಗೆ ಸ್ವಂದಿಸದೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.








