ಕೊರೊನಾ ದೇಗುಲ | ಜಗತ್ತಿಗೆ ಮಾರಿ ತಮಿಳುನಾಡಿನಲ್ಲಿ ದೇವತೆ
ಚೆನ್ನೈ : ಇಡೀ ಜಗತ್ತನ್ನ ತಲ್ಲಣಗೊಳಿಸಿ ಮಾನವ ಸಂಕುಲಕ್ಕೆ ಹೆಮ್ಮಾರಿಯಾಗಿ ಪ್ರತಿ ನಿತ್ಯ ಜನರ ಪ್ರಾಣ ಬಲಿಪಡೆಯುತ್ತಿರುವ ಕೊರೊನಾಗೆ ತಮಿಳುನಾಡಿನಲ್ಲಿ ದೇವರ ಸ್ವರೂಪ ನೀಡಲಾಗಿದೆ.
ಸಿಕ್ಕ ಸಿಕ್ಕವರ ದೇಹ ಹೊಕ್ಕಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾವನ್ನು ತಣ್ಣಾಗಾಗಿಸಲು ತಮಿಳುನಾಡಿನಲ್ಲಿ ಕೊರೊನಾಗೆ ದೇಗುಲ ನಿರ್ಮಿಸಿ ಕೊರೊನಾ ಅಮ್ಮ ಹೆಸರಿನಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತಿದೆ.
ತಮಿಳುನಾಡಿನ ಕೊಯಿಮತ್ತೂರಿನ ಜನ. ಕೊಯಿಮತ್ತೂರಿನ ಹೆಸರಾಂತ ಕಾಮಾಚಿಪುರಿ ಅಧೀನಂ ಪೀಠ ಕೋವಿಡ್ ಸೋಂಕಿಗಾಗಿ ವಿಶೇಷವಾಗಿ ಕೊರೊನಾ ದೇವಿ ದೇಗುಲವನ್ನು ನಿರ್ಮಿಸಿದೆ.
ಈ ದೇವಾಲಯದಲ್ಲಿ ಕೊರೊನಾ ದೇವರನ್ನು ಶಾಂತಗೊಳಿಸಿ, ಸೋಂಕು ನಿವಾರಣೆಯಾಗುವಂತೆ ದಿನನಿತ್ಯ ಪೂಜೆ ನಡೆಸಲಾಗುತ್ತಿದೆ.
ಈ ದೇವಾಲದಯಲ್ಲಿ 48 ದಿನಗಳ ಕಾಲ ವಿಶೇಷ ಪೂಜೆ ಮತ್ತು ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ವಿಶೇಷ ಮಹಾಯಾಗವನ್ನು ಆಯೋಜಿಸಲಾಗಿದೆ.