ಮೆಲ್ಬೋರ್ನ್: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾಗೆ ಔಷಧವಾಗಲಿ, ಲಸಿಕೆಯಾಗಲಿ ಇಲ್ಲ. ಇದುವರೆಗೂ ಕೊರೊನಾಗೆ ಆಂಟಿ ಮಲೇರಿಯಾ, ಆಂಟಿ ಎಚ್ ಐವಿ ಔಷಧಗಳಿಂದಲೇ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಆ ಮೆಡಿಸಿನ್ ಗಳಿಂದ ಸೈಡ್ ಎಫೆಕ್ಟ್ ಗಳು ಆಗುತ್ತಿವೆ. ಏತನ್ಮಧ್ಯೆ ಆಂಟಿ-ಪ್ಯಾರಾಸಿಟಿಕ್ ಔಷಧ ಐವರ್ಮೆಕ್ಟಿನ್ ಕೊರೊನಾ ವೈರಸ್ ಗಳನ್ನು 48ಗಂಟೆಗಳಲ್ಲಿ ಕೊಲ್ಲುತ್ತದೆ ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಈ ಬಗ್ಗೆ ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ಬಯೋಮೆಡಿಸಿನ್ ಡಿಸ್ಕವರಿ ಸಂಸ್ಥೆ ಮತ್ತು ಪೀಟರ್ ಡೊಹೆರ್ಟಿ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷನ್ ಮತ್ತು ಇಮ್ಯೂನಿಟಿ ಜಂಟಿ ಅಧ್ಯಯನ ನಡೆಸಿವೆ. ಕೊರೊನಾ ವೈರಸ್ ಗಳ ನಿರ್ಮೂಲನೆಯಲ್ಲಿ ಆಂಟಿ ಪ್ಯಾರಾಸಿಟಿಕ್ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.
ಸಂಶೋಧಕರು ಹೇಳಿದ್ದೇನು?
ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ. ಕೈಲಿ ವ್ಯಾಗ್ಸ್ಟಾಫ್ ಅವರು ಆಂಟಿ ಪ್ಯಾರಾಸಿಟಿಕ್ ಬಗ್ಗೆ ಮಾಹಿತಿ ನೀಡಿದ್ದು, ಆಂಟಿ ಪ್ಯಾರಾಸಿಟಿಕ್ ಔಷಧದ ಒಂದು ಡೋಸ್ ನಿಂದ ಆರ್ ಎನ್ ಎ ವೈರಸ್ ಗಳು 48ಗಂಟೆಗಳಲ್ಲಿ ಮೂಲಭೂತವಾಗಿ ನಿರ್ಮೂಲನೆಯಾಗುವುದು ಕಂಡುಬಂತು. ಬರೀ 24ಗಂಟೆಯಲ್ಲಿ ವೈರಸ್ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂತು ಎಂದು ತಿಳಿಸಿದ್ದಾರೆ.
ಆಂಟಿ ಪ್ಯಾರಾಸಿಟಿಕ್ ಎಲ್ಲಿ ಸಿಗುತ್ತೆ!
ಈ ಆಂಟಿ ಪ್ಯಾರಾಸಿಟಿಕ್ ವಿಶ್ವದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಾಮಾನ್ಯವಾಗಿ ಜ್ವರಕ್ಕೆ, ದೇಹದೊಳಗೆ ಬೆಳೆಯುವ ಪರಾವಲಂಬಿ ಜೀವಿಗಳನ್ನು ಕೊಲ್ಲಲು ಈ ಔಷಧವನ್ನು ಬಳಸಲಾಗುತ್ತದೆ.








