ಕೊರೋನಾ ವೈರಸ್ ಸೊಂಕಿತರು ಒಂದಿಲ್ಲ ಒಂದು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದೀಗ ಸೊಂಕು ದೃಡಪಟ್ಟ ಗರ್ಬೀಣಿ ಮಹಿಳೆಗೆ ಕೊರೋನಾ ವೈರಸ್ ಕಂಟಕವಾಗಿ ಮಾರ್ಪಟ್ಟಿದೆ. ಹೀಗಾಗಿ ಚೊಚ್ಚಲ ಹೆರಿಗೆಯ ನಿರೀಕ್ಷೆಯಲ್ಲಿದ್ದ ಬಾಗಲಕೋಟೆಯ ಬಾದಾಮಿಯ ಗರ್ಭಿಣಿ ಮಹಿಳೆಯ ಗರ್ಭಪಾತಕ್ಕೆ ಕಿಮ್ಸ್ ವೈದ್ಯರು ಮುಂದಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬದಾಮಿಯ ೫ ತಿಂಗಳ ಗರ್ಬೀಣಿಗೆ ಕಳೆದ ತಿಂಗಳ ಮೇ ೩ ರಂದು ಸೊಂಕು ದೃಡಪಟ್ಟಿತ್ತು. ಹೀಗಾಗಿ ಸೊಂಕು ದೃಡಪಟ್ಟ ನಂತರ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗರ್ಬೀಣಿಗೆ ಇದೀಗ ಗರ್ಭಪಾತ ಮಾಡಬೇಕಾದ ಪರಿಸ್ಥಿತಿ ವೈದ್ಯರಿಗೆ ಬಂದೊದಗಿದೆ. ಗರ್ಭಿಣಿ ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗಿ ಸುಸ್ತು ಹೆಚ್ಚಾಗುತ್ತಿದ್ದು. ಗರ್ಭಿಣಿಯ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗುತ್ತಿದೆ. ಅಲ್ಲದೇ ಮೂತ್ರದ ತೊಂದರೆ ಹಾಗೂ ಅಲ್ಸರ್ ಸಮಸ್ಯೆಯಿಂದ ಗರ್ಭಿಣಿ ಆರೋಗ್ಯದಲ್ಲಿ ಏರಿಳಿತವಾಗುತ್ತಿದ್ದು ಗರ್ಭಿಣಿ ಮಹಿಳೆಯ ಜೀವ ಉಳಿಸಿಕೊಳ್ಳಲು ವೈದ್ಯರು.
ಗರ್ಭಪಾತಕ್ಕೆ ನಿರ್ಧರಿಸಿದ್ದಾರೆ. ಆದ್ರೆ ಗರ್ಬೀಣಿಯ ಕುಟುಂಬದವರೆಲ್ಲಾ ಹೋಮ ಕ್ವಾರಟೈನ್ ನಲ್ಲಿರುವುದರಿಂದ ಕಿಮ್ಸ್ ವೈದ್ಯರು ಪೋನ್ ಮೂಲಕವೇ ಸಂಭದಿಕರ ಅಭಿಪ್ರಾಯ ಪಡೆಯುತ್ತಿದ್ದು. ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಗಭೀಣಿಗೆ ಚಿಕಿತ್ಸೆ ಮುಂದುವರೆದಿದೆ. ಅಲ್ಲದೇ ಗರ್ಬೀಣಿಯನ್ನ ನೋಡಿಕೊಳ್ಳಲು ಯಾರು ಇಲ್ಲದ ಪರಿಣಾಮ ಕಿಮ್ಸ್ ಸಿಬ್ಬಂದಿಯೇ ಅವರ ಮನೆಯಿಂದಲೇ ಗಂಜಿ ಜ್ಯೂಸ್ ತಂದುಕೊಟ್ಟು ಗರ್ಬೀಣಿಯನ್ನು ಆರೈಕೆ ಮಾಡುತ್ತಿರುವುದು ವಿಶೇಷವಾಗಿದೆ. ಆದ್ರೆ ಚೊಚ್ಚಲ ಹೆರಿಗೆ ನಿರೀಕ್ಷೆಯಲ್ಲಿದ್ದ ಗರ್ಬೀಣಿಗೆ ಇದೀಗ ಗರ್ಭಪಾತ ಮಾಡಬೇಕಾಗಿರುವುದು ಕಿಲ್ಲರ್ ಕೊರೋನಾ ಅಟ್ಟಹಾಸಕ್ಕೆ ಶಾಪ ಹಾಕುವಂತೆ ಮಾಡಿದೆ.
ರಾಜ್ಯದ ರೈತರಿಗೆ ಗುಡ್ ನ್ಯೂಸ್:’ಮೊಬೈಲ್’ಮೂಲಕವೇ ‘ಜಮೀನಿನ ಪೋಡಿ ನಕ್ಷೆ’ Download ಮಾಡಿ
ರಾಜ್ಯದ ರೈತರಿಗೆ ಗುಡ್ ನ್ಯೂಸ್:'ಮೊಬೈಲ್'ಮೂಲಕವೇ 'ಜಮೀನಿನ ಪೋಡಿ ನಕ್ಷೆ' Download ಮಾಡಿಕೊಳ್ಳಿ ಹೇಗೆ ತಿಳಿಯೋಣ ಬನ್ನಿ.. ಪೋಡಿ ಎಂದರೇನು? “ಪೋಡಿ” ಎಂಬ ಪದವು ಬಹು ಮಾಲೀಕರ ನಡುವೆ...