ದೇಶಾದ್ಯಂತ ಕ್ಷೀಣವಾಗ್ತಿದೆ ಕೊರೊನಾ ಶಕ್ತಿ
ಇಡೀ ವಿಶ್ವಾದ್ಯಂತ ಅಬ್ಬರಿಸಿ ಬೊಬ್ಬಿರಿದಿದ್ದ ಕೊರೊನಾ ಮಾಹಾಮಾರಿಕೆ ಭಾರತವೂ ತತ್ತರಿಸಿಹೋಗಿತ್ತು.
ಲಕ್ಷಾಂತರ ಜನರು ಹೆಮ್ಮಾರಿ ಕೊರೊನಾ ಸೋಂಕಿಗೆ ತುತ್ತಾಗಿದ್ರೆ , ಸಾವಿರಾರು ಜನರು ಪಪ್ರಾಣ ಬಿಟ್ಟಿದ್ರು.
ಸುಮಾರು ತಿಂಗಳುಗಳ ಕಾಲ ದೇಶಾದ್ಯಂತ ರಣ ಕೇಕೆ ಹಾಕಿದ್ದ ಕೊರೊನಾ ಶಕ್ತಿ ಇದೀಗ ದಿನಗಳೆದಂತೆಲ್ಲಾ ಕುಂದುತ್ತಿದೆ.
ಹೌದು ಲಕ್ಷದ ಸನಿಹಕ್ಕೆ ದಾಟುತ್ತಿದ್ದ ದಿನಪ್ರತಿ ಕೊರೊನಾ ಸೋಂಕಿತರ ಸಂಖ್ಯೆ ಇದೀಗ ಕ್ರಮೇಣ ಇಳಿಮುಖವಾಗುತ್ತಾ ಬರುತ್ತಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಅಂದ್ಹಾಗೆ ಇಂದು ದೇಶಾದ್ಯಂತ 30,548 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
‘ಪತ್ರಿಕಾ ಸ್ವಾತಂತ್ರ ಹತ್ತಿಕ್ಕುವವರನ್ನ ಮೋದಿ ಸರ್ಕಾರ ತೀವ್ರವಾಗಿ ವಿರೋಧಿಸುತ್ತೆ’ : ಅಮಿತ್ ಶಾ
ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 88,45,127ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 435 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,30,070ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 4,65,478 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 82,49,579 ಸೋಂಕಿತರು ಗುಣಮುಖರಾಗಿದ್ದಾರೆ.
ಬಿಹಾರದಲ್ಲಿ 4ನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ..!
ಕಳೆದ 24 ಗಂಟೆಯಲ್ಲಿ 43,851 ಸೋಂಕಿತರು ಗುಣಮುಖರಾಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









