ತುಮಕೂರಿನ ನರ್ಸಿಂಗ್, ಚಿಕ್ಕಮಗಳೂರಿನ ನವೊದಯ ಶಾಲೆಯಲ್ಲಿ ಕರೋನ ಸ್ಪೋಟ
ಓಮಿಕ್ರಾನ್ ಆತಂಕದ ನಡುವೆಯೇ ಶಾಲಾ ಕಾಲೇಜುಗಳಲ್ಲಿ ಕರೋನಾ ಮತ್ತೆ ಮತ್ತೆ ಹೆಚ್ಚಳವಾಗುತ್ತಿದೆ. ತುಮಕೂರಿನ ನರ್ಸಿಂಗ್ ಕಾಲೇಜುಗಳ 23 ವಿದ್ಯಾರ್ಥಿಗಳಿಗೆ ಕರೋನಾ ಸೋಂಕು ಧೃಡ ಪಟ್ಟಿದೆ. ಸಿದ್ದಗಂಗಾ ನರ್ಸಿಂಗ್ ಕಾಲೇಜಿನಲ್ಲಿ 8 ವಿದ್ಯಾರ್ಥಿಗಳು ಅರುಣ ನರ್ಸಿಂಗ್ ಕಾಲೇಜಿನ ಮೂವರು ಮತ್ತು ವರದರಾಜ ನರ್ಸಿಂಗ್ ಕಾಲೇಜಿನ 12 ವಿದ್ಯಾರ್ಥಿಗಳಲ್ಲಿ ಕರೋನಾ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ನವೊದಯ ವಿದ್ಯಾಲಯದಲ್ಲಿ ಇಂದು ಸಹ ಕರೋನಾ ಸ್ಪೋಟವಾಗಿದೆ. ಇಂದು ಮತ್ತೆ 38 ವಿದ್ಯಾರ್ಥಿಗಳಲ್ಲಿ ಕರೋನಾ ಪತ್ತೆಯಾಗಿದೆ. ಈ ಮೂಲಕ ನಾಲ್ಕೇ ದಿನದಲ್ಲಿ 107 ಕೇಸ್ ಗಳು ಪತ್ತೆಯಾದಂತಾಗಿದೆ. ಬಾಳೆಹೊನ್ನುರು ಸಮೀಪದ ಸಿಗೋಡು ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸದ್ಯಕ್ಕೆ ವಸತಿ ಶಾಲೆಯನ್ನ ಸೀಲ್ ಡೌನ್ ಮಾಡಲಾಗಿದೆ.
ವಸತಿ ಶಾಲೆ ಕಾಲೇಜುಗಳಲ್ಲಿ ಕರೋನಾ ಹೆಚ್ಚಳಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಶಾಲಾ – ಕಾಲೇಜುಗಳಿಗೆ ಬೇಟಿ ನೀಡಿ ಪರಿಶೀಲಿಸಲಿದ್ದಾರೆ, ಇಂದು ವಿಧಾನಸೌದದಲ್ಲಿ ಮಾತನಾಡಿದ ಶಿಕ್ಷಣ ಸಚಿವರು ಅಗತ್ಯ ಬಿದ್ದರೆ ಶಾಲೆಗಳನ್ನ ಮುಚ್ಚುವುದಾಗಿ ತಿಳಿಸಿದರು.








