ಬೆಂಗಳೂರಿನ ಮತ್ತೊಬ್ಬ ಟೆಕ್ಕಿಯಲ್ಲಿ ವೈರಸ್ ಇರುವುದು ಖಚಿತವಾಗಿದ್ದು ಈ ಮೂಲಕ ರಾಜ್ಯದಲ್ಲಿ ನಾಲ್ವರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ತುರ್ತು ಸಭೆ ಕರೆದಿದ್ದಾರೆ. ಅಮೆರಿಕದಿಂದ ಬೆಂಗಳೂರಿಗೆ ಹಿಂತಿರುಗಿದ ಟೆಕ್ಕಿಗೆ ಕೊರೋನಾ ವೈರಸ್ ಖಚಿತವಾದ ಬೆನ್ನಲ್ಲೇ ಆತನ ಪತ್ನಿ, ಮಗು ಕೊರೋನಾ ವೈರಸ್ ದೃಢಪಟ್ಟಿತ್ತು. ಇದೀಗ ಆರ್ಆರ್ ನಗರದ ಟೆಕ್ಕಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪೆನಿಯು ತನ್ನ ಎಲ್ಲಾ ಉದ್ಯೊಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ. ಟೆಕ್ಕಿಯ ಮಗು ಕಲಿಯುತ್ತಿರುವ ಶಾಲೆಗೆ ರಜೆ ಘೋಷಿಸಿದ್ದು, ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಕೆಲವೇ ಕ್ಷಣದಲ್ಲಿ ಮುಖ್ಯಮಂತ್ರಿ ಗಳು ತುರ್ತು ಸಭೆ ನಡೆಸಲಿದ್ದು, ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮತ್ತು ಹಿರಿಯ ಆರೋಗ್ಯಾಧಿಕಾರಿಗಳು ಭಾಗಿಯಾಗಲಿದ್ದಾರೆ.
“ಸುಮ್ಮನೆ ಬಿಡ್ತೀನಿ ಅಂದುಕೊಂಡ್ರೆ ತಪ್ಪು!” – ವಿರಾಟ ದರ್ಶನ
ಸುಮ್ಮನೆ ನನ್ನ ತಂಟೆಗೆ ಬರಬೇಡಿ.. ಬಂದ್ರೆ ಸುಮ್ಮನೆ ಬಿಡಲ್ಲ..! ಈತ ರಕ್ಷಕನೂ ಹೌದು.. ಭಕ್ಷಕನೋ ಹೌದು..ಈತನನ್ನು ಅರ್ಥಮಾಡಿಕೊಳ್ಳೋದೇ ಕಷ್ಟ ಕಷ್ಟ..ಒಂದೊಂದು ಸಲ ಕಿರಿಕ್ ಮನುಷ್ಯನಂತೆ ಕಾಣುತ್ತಾನೆ.. ಸೇಡಿಗೆ...