ಚಿಕ್ಕೋಡಿ | ಒಂದೇ ಕುಟುಂಬದ 14 ಮಂದಿಗೆ ಕೊರೊನಾ
ಚಿಕ್ಕೋಡಿ : ರಾಜ್ಯದಲ್ಲಿ ಕೊರೊನಾ ಅಬ್ಬರ ಮತ್ತೆ ಶುರುವಾಗಿದ್ದು, ಜನರು ಆತಂಕದಲ್ಲಿದ್ದಾರೆ.
ಈ ಮಧ್ಯೆ ಬೆಳಗಾವಿಯ ಚಿಕ್ಕೋಡಿಯ ಭಾವನಸೌಂಧತ್ತಿ ಗ್ರಾಮದಲ್ಲಿ ಕೊರೊನಾ ಸ್ಫೋಟವಾಗಿದ್ದು, ಒಂದೇ ಕುಟುಂಬದ 14 ಮಂದಿಗೆ ಸೋಂಕಿರುವುದು ದೃಢಪಟ್ಟಿದೆ.
ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ನಿನ್ನೆ ಗ್ರಾಮದ 7 ಜನರಲ್ಲಿ ಕೊರೋನಾ ಪಾಸಿಟವ್ ಬಂದ ಹಿನ್ನೆಲೆ ಗ್ರಾಮದ 353 ಜನರಿಗೆ ಕೊರೋನಾ ಟೆಸ್ಟ್ ನಡೆಸಲಾಗಿತ್ತು.
ಇದರಲ್ಲಿ ಅವಿಭಕ್ತ ಕುಟುಂಬದ 47 ಜನರಲ್ಲಿ 21 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
ಇವರು ಕೆಲದಿನಗಳ ಹಿಂದೆ ಮಹಾರಾಷ್ಟ್ರದ ಸಂಬಂಧಿಗಳ ಮನೆಗೆ ಹೋಗಿ ಬಂದಿದ್ದರಂತೆ.
ಈ ವೇಳೆ ಕುಟುಂಬದ ಒಬ್ಬರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಟೆಸ್ಟ್ ನಡೆಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ.









