ಸಿದ್ದಗಂಗಾ ಮಠದಲ್ಲಿ 20 ರಿಂದ 30 ವಿದ್ಯಾರ್ಥಿಗಳಿಗೆ ಕೊರೊನಾ
ತುಮಕೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಮುಂದುವರೆದಿದ್ದು, ಇದೀಗ ಸಿದ್ದಗಂಗಾ ಮಠದಲ್ಲಿ 20 ರಿಂದ 30 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ.
ಈ ಬಗ್ಗೆ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾಹಿತಿ ನೀಡಿದ್ದು, ಮಠದಲ್ಲಿ ಪ್ರಸ್ತುತ 2 ಸಾವಿರ ಮಕ್ಕಳಿದ್ದಾರೆ.
ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ಇವರ ಪೈಕಿ 25 ರಿಂದ 30 ಮಕ್ಕಳಿಗೆ ಎಸಿಂಪ್ಟಮಾಟಿಕ್ ಇರೋದು ಕಂಡು ಬಂದಿದೆ.
ಮಕ್ಕಳಿಗೆ ನೆಗಡಿ ಹಾಗೂ ಕೆಮ್ಮಿನಂತಹ ಲಕ್ಷಣಗಳಿಲ್ಲ. ಎಲ್ಲರೂ ದೈಹಿಕವಾಗಿ ಚೆನ್ನಾಗಿದ್ದಾರೆ ಎಂದು ಹೇಳಿದರು.
ಇನ್ನು ಕೊರೊನಾ ಸೋಂಕಿತ ಮಕ್ಕಳಿಗೆ ಪ್ರತ್ಯೇಕವಾಗಿ ಇರುವ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರದಿಂದ ಅಧಿಕಾರಿಗಳು ಬಂದು ಪರೀಕ್ಷೆ ಮಾಡುತ್ತಿದ್ದಾರೆ ಎಂದು ಹೇಳಿದರು.