ಚೀನಾದಲ್ಲಿ ಸೋಮವಾರ 78 ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಮೂರು ದಿನಗಳಿಂದ ಕೊರೊನಾವೈರಸ್ ನ ಕೇಂದ್ರ ಸ್ಥಾನವಾದ ಚೀನಾದಲ್ಲಿ ಒಂದೇ ಒಂದು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿರಲಿಲ್ಲ ಹಾಗೂ ಹೊಸ ಪ್ರಕರಣಗಳು ಪತ್ತೆ ಯಾಗದ ಹಿನ್ನೆಲೆಯಲ್ಲಿ ಚೀನಾ ಸಹಜ ಸ್ಥಿತಿಗೆ ಮರಳಲಿದೆ ಎಂಬ ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ ಸೋಮವಾರ ಒಂದೇ ದಿನದಲ್ಲಿ 78 ಹೊಸ ಪ್ರಕರಣ ದಾಖಲಾಗುವುದರೊಂದಿಗೆ ಸಹಜವಾಗಿಯೇ ಆತಂಕ ಮೂಡಿಸಿದೆ.
ಚೀನಾ ಸಹಜ ಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಇದ್ದವರು ಹಿಂತಿರುಗಿದ ಕಾರಣ ಸೋಂಕು ಪೀಡಿತರ ಪ್ರಮಾಣ ದುಪ್ಪಟ್ಟಾಗಿರುವುದಾಗಿ ವರದಿಗಳು ತಿಳಿಸಿವೆ. ಕೊರೋನಾ ಸೋಂಕು ಪೀಡಿತ 78 ಮಂದಿಯಲ್ಲಿ 74 ಜನರು ವಿದೇಶದಿಂದ ಮರಳಿದವರು ಆಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಕೂಡ ತಿಳಿಸಿದೆ.
ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೋವಿಡ್-19 ಸೋಂಕು ಮರಣ ಮೃದಂಗ ಬಾರಿಸಿ ನಂತರ ವಿಶ್ವದೆಲ್ಲೆಡೆ ಮುಖ ಮಾಡಿತ್ತು. ಇತ್ತೀಚಿನ ದಿನಗಳಲ್ಲಿ ಚೀನಾದಲ್ಲಿ ಸೋಂಕಿತರ ಪ್ರ,ಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ವರದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂದು ಮೂಡಿದ್ದ ನಿರೀಕ್ಷೆ ಇದೀಗ ಸುಳ್ಳಾಗಿದ್ದು, ಈ ಸೋಂಕು ನಿಯಂತ್ರಣಕ್ಕೆ ಬರುವ ಲಕ್ಷಣವೇ ಗೋಚರವಾಗುತ್ತಿಲ್ಲ. ಎಲ್ಲವೂ ನಿಯಂತ್ರಣಕ್ಕೆ ಬಂದಿದೆ ಎನ್ನುವಾಗ ಮತ್ತೆ ಕೊರೊನಾ ವೈರಸ್ ಚೀನಾವನ್ನು ಕಾಡಲು ಪ್ರಾರಂಭಿಸಿದೆ. ಕೊರೋನಾ ವೈರಸ್ ನಿಂದ ತತ್ತರಿಸಿ ಹೋಗಿರುವ ಇಟಲಿಯಲ್ಲಿ ಸೋಂಕಿತರ ಸಂಖ್ಯೆ 63 ಸಾವಿರದ ಗಡಿ ತಲುಪಿದರೆ, ಸೋಮವಾರ ಒಂದೇ ದಿನದಲ್ಲಿ 600 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 6,078 ಕ್ಕೆ ಏರಿಕೆಯಾಗಿದೆ. ಪರಿಸ್ಥಿತಿ ಬಹಳಷ್ಟು ಚಿಂತಾಜನಕವಾಗಿದ್ದು, ಇಡೀ ಇಟಲಿ ರಾಷ್ಟ್ರವೇ ಲಾಕ್ ಡೌನ್ ಆಗಿದೆ. ದಿನ ನಿತ್ಯ ಬಳಕೆಯ ವಸ್ತುಗಳು ಸರಿಯಾಗಿ ಸಿಗದೆ, ಜನರು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇಟಲಿಯಲ್ಲಿ ಬಂದೊದಗಿದೆ. ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದೆ.
ಮಹಾ ಮಾರಿ ಕೊರೊನಾ ವೈರಸ್ ಗೆ ವಿಶ್ವದಾದ್ಯಂತ 16,500 ಜನರು ಬಲಿಯಾಗಿದ್ದು, 378,000ಕ್ಕಿಂತ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದಾರೆ. ಮಾತ್ರವಲ್ಲದೆ 1.5 ಬಿಲಿಯನ್ ಜನರು ಮನೆಯಲ್ಲಿ ಕುಳಿತು ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ
2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ
2028ರ ವಿಧಾನಸಭಾ ಚುನಾವಣೆಗೆ ಜೆಡಿಎಸ್–ಬಿಜೆಪಿ ಮೈತ್ರಿ ವಿಚಾರವಾಗಿ ರಾಜಕೀಯ ಸಂದೇಶಗಳು ಹೊರಬರುತ್ತಿರುವ ಹಿನ್ನೆಲೆ, ಬಿಜೆಪಿಯ ಜಿಲ್ಲಾ ಘಟಕದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲ ಹೆಚ್ಚಾಗಿದೆ...








