ದೆಹಲಿ : ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಕೊರೊನಾ ಸೋಂಕಿನಿಂದಾಗಿ ಜನರು ಹೈರಾಣಾಗಿದ್ದಾರೆ. ಸೋಂಕು ಹರಡುವಿಕೆಯನ್ನು ತಡೆಯಲು ಕೇಂದ್ರ, ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿವೆ. ಎಷ್ಟೇ ಕ್ರಮಗಳನ್ನು ತೆಗೆದುಕೊಂಡರೂ ಕೊರೊನಾಸುರ ತನ್ನ ಕಬಂದ ಬಾಹುಗಳನ್ನು ಚಾಚುತ್ತಲೇ ಇದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ‘ಮೈಗೋವ್ ಕೊರೊನಾ ಸಹಾಯಕೇಂದ್ರ’ ಆರಂಭಿಸಿದೆ.
ಇದು ವಾಟ್ಸಾಪ್‌ನಲ್ಲಿ ಲಭ್ಯವಿದ್ದು, ಕೊರೊನಾ ಕುರಿತು ನಿಮಗೆ ಕಾಡುವ ಅನುಮಾನ, ಕುತೂಹಲಗಳಿಗೆ ಈ ಆಪ್ ನಲ್ಲಿ ಉತ್ತರ ಪಡೆಯಬಹುದು. ಕೊರೊನಾ ಕುರಿತಂತೆ ಸಂದೇಶಗಳಿದ್ದರೂ ಈ ವಾಟ್ಸಾಪ್ ಚಾಟ್‌ಬಾಟ್ ಮೂಲಕ ಸಿಗುತ್ತೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೆ. ನಿಮ್ಮ ಫೋನ್‌ನಲ್ಲಿ 9013151515 ಸಂಖ್ಯೆ ಸೇವ್ ಮಾಡಿಕೊಳ್ಳಿ. ಕೊರೊನಾ ಬಗ್ಗೆ ನಿಮಗೆ ಏನಾದರೂ ಮಾಹಿತಿ ಬೇಕು ಅಂದ್ರೆ ಈ ನಂಬರ್‌ಗೆ ಸಂದೇಶ ರವಾನಿಸಿ, ತಕ್ಷಣ ಮಾಹಿತಿ ಸಿಗುತ್ತೆ.
ಈ ವಾಟ್ಸಾಪ್ ಚಾಟ್‌ಬಾಟ್ ಸ್ವಯಂಚಾಲಿತವಾಗಿರುತ್ತದೆ ಮತ್ತು ಕೊರೊನಾಗೆ ಸಂಬಂಧಪಟ್ಟಂತೆ ಕೇಂದ್ರ ಇಲಾಖೆಯಿಂದ ಸ್ಪಷ್ಟ ಮಾಹಿತಿ ಸಿಗುತ್ತದೆ.








