Corona ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ : ಯಾವುದು ಲಾಕ್.. ಯಾವುದು ಅನ್ ಲಾಕ್..?
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಪ್ರತಿ ದಿನ ನಗರದಲ್ಲಿ ಕೊರೊನಾ ಸ್ಫೋಟವಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಂದು ಕಡೆ ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕಾಗಿ ಇಂದಿನಿಂದಲೇ ಜಾರಿಯಾಗುವಂತೆ ರಾಜ್ಯ ಸರ್ಕಾರ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಲಿದೆ.
ಮೂಲಗಳ ಪ್ರಕಾರ ಮೇ ತಿಂಗಳ ಅಂತ್ಯದವರೆಗೂ ಅನ್ವಯವಾಗುವಂತೆ ಬೆಂಗಳೂರಿನಲ್ಲಿ ಬಿಗಿಯಾದ ನಿಯಮಗಳನ್ನ ಸರ್ಕಾರ ಜಾರಿ ತರಲಿವೆ. ಅಲ್ಲದೆ ರಾತ್ರಿ ಕಫ್ರ್ಯೂ ಸಮಯವನ್ನ ವಿಸ್ತರಿಸಿ ರಾತ್ರಿ 8 ಗಂಟೆಯಿಂದ ಮುಂಜಾನೆ 6 ಗಂಟೆವರೆಗೆ ಕಫ್ರ್ಯೂ ವಿಸ್ತರಿಸಲಿದೆ.
ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಹೇಗಿರಬೇಕು..?
ನಗರದಲ್ಲಿ ಜನರ ಓಡಾಡಕ್ಕೆ ಸಂಪೂರ್ಣವಾಗಿ ನಿಬರ್ಂಧ ಏರ್ಪಡಿಸಬಹುದು.
ವಾಹನ ಸಂಚಾರಕ್ಕೆ ಸಂಪೂರ್ಣ ನಿಬರ್ಂಧ
ಬೆಂಗಳೂರಿನಿಂದ ಹೋಗುವ, ಬರುವವರ ಮೇಲೆ ನಿಬರ್ಂಧ
ಬಾರ್, ಪಬ್, ಮಾಲ್, ದೇವಸ್ಥಾನಗಳು ಸಂಪೂರ್ಣ ಬಂದ್
ಸಿನಿಮಾ ಹಾಲ್, ಜಿಮ್, ಈಜುಕೊಳ ಬಂದ್
ಸಭೆ, ಸಮಾರಂಭಗಳಿಗೆ ನಿಬರ್ಂಧ, ಮದುವೆಗೆ ಪಾಸ್ ಕಡ್ಡಾಯ
ಜಾತ್ರೆ, ವಿಶೇಷ ಸಮಾರಂಭಗಳಿಗೆ ನಿಬರ್ಂಧ
ಅಗತ್ಯ ಸೇವೆಗಳ ಕಚೇರಿಗಳಲ್ಲಿ 50% ಉದ್ಯೋಗಿಗಳ ಹಾಜರಿ
ಮಾರ್ಕೆಟ್ ವಿಕೇಂದ್ರೀಕರಣ ಮಾಡಬಹುದು.
ಮಾಂಸದ ಅಂಗಡಿಗಳಿಗೆ ಸಮಯ ನಿಗದಿ.
ಹೊಟೇಲ್, ಬಾರ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ
ಯಾವುದಕ್ಕೆ ವಿನಾಯಿತಿ
ಹಾಲು, ತರಕಾರಿ, ದಿನಸಿ ಅಂಗಡಿಗಳಿಗೆ ಸಮಯ ನಿಗದಿ
ಬೆಳಗ್ಗೆ ಕೆಲ ಗಂಟೆ, ಸಂಜೆ ಕೆಲ ಗಂಟೆ ಟಫ್ ನಿಯಮದಿಂದ ವಿನಾಯ್ತಿ
ಆಸ್ಪತ್ರೆ, ಮೆಡಿಕಲ್ ಸ್ಟೋರ್ ಗಳು ಯಥಾಸ್ಥಿತಿ
ಪಾರ್ಕ್ ಪ್ರವೇಶಕ್ಕೆ ಸಮಯ ನಿಗದಿ
ಎಲ್ಲಾ ರೀತಿಯ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆ ಅವಕಾಶ










