ಕೊರೊನಾ ಹೆಚ್ಚಳ : ವೀಕೆಂಡ್ ಕರ್ಫ್ಯೂ.. ಭಾನುವಾರ ಕಂಪ್ಲೀಟ್ ಲಾಕ್ Weekend Curfew Saaksha tv
ನವದೆಹಲಿ : ದೇಶದಲ್ಲಿ ನೋಡ ನೋಡುತ್ತಿದ್ದಂತೆ ಕೊರೊನಾ ಮೂರನೇ ಅಲೆ ಅಬ್ಬರಿಸಲು ಶುರುಮಾಡಿದೆ.
ದೆಹಲಿಯಲ್ಲಿ ಹೆಮ್ಮಾರಿ ಸೋಂಕು ಅಬ್ಬರಿಸುತ್ತಿದ್ದು, ದೆಹಲಿ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೆ ಮುಂದಾಗಿದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಡೆಲ್ಲಿ ಸರ್ಕಾರ ವೀಕೆಂಡ್ ಕರ್ಫ್ಯೂ ಮೊರೆ ಹೋಗಿದೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ಶನಿವಾರ ಕರ್ಫ್ಯೂ ಹೇರಿ, ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಮಾಡಲು ಕೇಜ್ರಿವಾಲ್ ಸರ್ಕಾರ ಚಿಂತನೆ ನಡೆಸಿದೆ.
ವೇಕೆಂಡ್ ಕರ್ಫ್ಯೂ ವೇಳೆ ವಾಣಿಜ್ಯ ಚಟುವಟಿಕೆಗಳಿಗೆ ಶೇ. 50 ರಷ್ಟು ಮಾತ್ರ ಅವಕಾಶವನ್ನು ನೀಡಲಾಗಿದೆ.
ಕಂಟೈನ್ಮೆಂಟ್ ವಲಯದ ಸಿಬ್ಬಂದಿ ಆ ವಲಯಗಳನ್ನು ಕೋವಿಡ್ ಕಂಟೈನ್ಮೆಂಟ್ ಮುಕ್ತವಾಗಿಸುವವರೆಗೆ ಕಚೇರಿಗೆ ಬರುವಂತಿಲ್ಲ.
ಸರ್ಕಾರಿ ಕಚೇರಿಯಲ್ಲಿ ಶೆ. 50 ರಷ್ಟು ಮಂದಿಗೆ ಮಾತ್ರವೇ ಇರಬೇಕು. ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಇನ್ನು ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 4,099 ಹೊಸ ಕೇಸ್ಗಳು ಪತ್ತೆಯಾಗಿದೆ. ಸದ್ಯ ದೆಹಲಿಯ ಪಾಸಿಟಿವ್ ರೆಟ್ ಶೇ.6.46ಕ್ಕೆ ಏರಿದೆ.