ಕೊರೊನಾದಿಂದಾಗಿ ಜನರು ಮನೆಯಿಂದ ಹೊರಗಡೆ ಬರಲು ಭಯಪಡುತ್ತಿದ್ದಾರೆ. ಅದೆಷ್ಟೊ ಕಂಪನಿಗಳು ತಮ್ಮ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿವೆ. ಇನ್ನು, ಕೆಲ ಕಾಲೇಜುಗಳು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಕ್ಲಾಸಸ್ ಮಾಡ್ತಿವೆ. ಮನೇಲಿದ್ರೂ ಕೆಲವರಿಗೆ ಬೋರ್ ಹೊಡೀತಿಲ್ಲ, ಆರಾಮಾಗಿ ಸಮಯ ಕಳೀತಿದ್ದಾರೆ ಅಂದ್ರೆ ಅದಕ್ಕೆ ಕಾರಣ ಇಂಟರ್ ನೆಟ್. ಎಲ್ಲೇ ಇರ‍್ಲಿ ಹೇಗೆ ಇರ‍್ಲಿ ನೆಟ್ ಒಂದು ಇದ್ರೆ ಸಾಕು ಅನ್ನೋ ಕಾಲವಿದು. ಆದ್ರೆ ಈಗ ಅಂತರ್ಜಾಲ ಕೈಕೊಟ್ರೆ ಅಥವಾ ಸ್ಲೋಡೌನ್ ಆದ್ರೆ ನಮ್ಮ ಪರಿಸ್ಥಿತಿ ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮನೆಮಾಡಿದೆ.
ಕೊರೊನಾದಿಂದಾಗಿ ದೇಶ ಲಾಕ್ ಡೌನ್ ಆಗಿರುವುದರಿಂದ ಇಂಟರ್ ನೆಟ್ ಸಹ ಶೀಘ್ರದಲ್ಲಿ ಸ್ಥಗಿತಗೊಳ್ಳಲಿದೆ ಎಂಬ ಗಾಳಿ ಸುದ್ದಿ ಈಗ ಜೋರಾಗಿ ಬೀಸುತ್ತಿದೆ. ಇದರಿಂದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಆದ್ರೆ ಭಾರತದ ಇಂಟರ್ ನೆಟ್ ಪ್ರೊವೈಡರ್ಸ್ ಹೀಗೆಲ್ಲ ಆಗೋಲ್ಲ, ನೆಟ್ ವರ್ಕ್ ಗಳು ಆಯಕ್ಟಿವ್ ಆಗಿರೋ ಹಾಗೆ ನೋಡಿಕೊಳ್ತೇವೆ. ಒಂದು ವೇಳೆ ಆ ರೀತಿಯ ಪ್ರಾಬ್ಲಂ ಆದ್ರೆ ಅದಕ್ಕೆ ಪರಿಹಾರ ಕಂಡುಕೊಳ್ತೀವಿ ಅಂತಾ ಹೇಳ್ತಿದ್ದಾರೆ.
ಆದ್ರೆ ಜನರಲ್ಲಿ ಮಾತ್ರ ಒಂದು ಡೌಟ್ ಕಾಡುತ್ತಲ್ಲೇ ಇದ್ದು, ಇಂಟರ್ ನೆಟ್ ಪ್ರಾಬ್ಲಂ ಆಗ್ತಿಲ್ಲ ಅನ್ನೋದಾದ್ರೆ ಎಲ್ಲಾ ವಿಡಿಯೋಗಳ ಬ್ಯಾಂಡ್ ವಿಡ್ತ್ ಗಳನ್ನ ಕಡಿಮೆ ಮಾಡೋ ಅವಶ್ಯಕತೆಯಾದ್ರು ಏನಿದೆ ಅಂತ.
ಇದೆಲ್ಲಾ ಏನೇ ಇದ್ರೂ ಇಂಟರ್ ನೆಟ್ ಪ್ರೊವೈಡರ್ಸ್ ಮಾತ್ರ ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ ಎನ್ನುತ್ತಿದ್ದಾರೆ.








