ಕೊರೊನಾ | ನವೆಂಬರಲ್ಲಿ ದೇಶದಲ್ಲಿ ಪತ್ತೆಯಾದ ಕೋವಿಡ್ ಕೇಸ್ ಗಳೆಷ್ಟು ಗೊತ್ತಾ..?
ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.
ಈ ತಿಂಗಳು ಅಂದ್ರೆ ನವೆಂಬರ್ ತಿಂಗಳಿನಲ್ಲಿ 12.8 ಲಕ್ಷ ಕೋವಿಡ್-19 ಪ್ರಕರಣಗಳು ವರದಿಯಾಗಿದೆ.
ಅಲ್ಲದೆ ಈ ತಿಂಗಳಲ್ಲಿ ಕೊರೊನಾದಿಂದ 15,494 ಮೃತಪಟ್ಟಿದ್ದಾರೆ. ಕಳೆದ ಅಕ್ಟೋಬರ್‍ನಲ್ಲಿ ದಾಖಲಾದ 23,472ಕ್ಕೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ.
ಇತ್ತ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 31,118 ಹೊಸ ಕೇಸ್ ಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 9,42,9810ಕ್ಕೆ ತಲುಪಿದೆ.
ಇನ್ನು ಇದೇ ಅವಧಿಯಲ್ಲಿ 482 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಇದುವರೆಗೆ ದೇಶದಲ್ಲಿ ಒಟ್ಟು 1,37,621 ಮಂದಿ ಮೃತಪಟ್ಟಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್‌ನಿಂದಾದ ಸಾಲ ತೀರಿಸಲು ತಾಯಿ ಮತ್ತು ಸಹೋದರಿಯನ್ನು ಹತ್ಯೆಗೈದ ಎಂಟೆಕ್ ವಿದ್ಯಾರ್ಥಿ
ಇನ್ನು ನಿನ್ನೆ 41,985 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೂ ಒಟ್ಟು 88,89,585 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 4,35,603 ಸಕ್ರಿಯ ಕೇಸುಗಳಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









