ಯೋಗಿ ಸರ್ಕಾರದ ಇಬ್ಬರು ಹಿರಿಯ ಮಂತ್ರಿಗಳಿಗೆ ಕೊರೊನಾ ಸೋಂಕು
ಲಖನೌ, ಜುಲೈ 6: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಇಬ್ಬರು ಹಿರಿಯ ಮಂತ್ರಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮೋತಿ ಸಿಂಗ್ ಎಂದು ಜನಪ್ರಿಯವಾಗಿರುವ ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಮತ್ತು ಅವರ ಪತ್ನಿ, ಮಗ, ಸೊಸೆ ಮತ್ತು ಮೊಮ್ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿನ ಮರು ದೃಢೀಕರಣದ ಬಳಿಕ ಸಚಿವರು ಮತ್ತು ಅವರ ಕುಟುಂಬ ಸಚಿವರು ಮತ್ತು ಅವರ ಕುಟುಂಬವನ್ನು ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಗೆ (ಎಸ್‌ಜಿಪಿಜಿಐಎಂಎಸ್) ದಾಖಲಿಸಲಾಗಿದೆ. ಲಕ್ನೋ ಸಿಎಂಒ ನರೇಂದ್ರ ಅಗರ್ವಾಲ್ ಅವರು ಸೋಂಕಿತರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದ್ದಾರೆ.

ಕೊರೊನಾ ಸೋಂಕು ದೃಢಪಟ್ಟ ಮತ್ತೊಬ್ಬ ಸಚಿವ ಆಯುಷ್ ಸಚಿವಾಲಯದ ಮುಖ್ಯಸ್ಥ ಧರಮ್ ಸಿಂಗ್ ಸೈನಿ. ಅವರನ್ನು ಪಿಲಖ್ನಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ ರಾಜ್ಯದ ವಿರೋಧ ಪಕ್ಷದ ನಾಯಕ ಮತ್ತು ಹಿರಿಯ ಸಮಾಜವಾದಿ ಶಾಸಕ ರಾಮ್ ಗೋವಿಂದ್ ಚೌಧರಿ ಅವರು ಎಸ್‌ಜಿಪಿಜಿಐಎಂಎಸ್‌ನಲ್ಲಿದ್ದಾರೆ. ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಎಸ್‌ಜಿಪಿಜಿಐಯ ವೈದ್ಯಕೀಯ ಅಧೀಕ್ಷ ಆರ್.ಕೆ. ಸಿಂಗ್ ಅವರು ರಾಮ್ ಗೋವಿಂದ್ ಚೌಧರಿ ತೀವ್ರ ನಿಗಾ ಘಟಕದಲ್ಲಿ ಆಮ್ಲಜನಕದ ಬೆಂಬಲದಲ್ಲಿದ್ದಾರೆ ಆದರೆ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಎಲ್ಲಾ ಸಹ-ಕಾಯಿಲೆಗಳು ನಿಯಂತ್ರಣದಲ್ಲಿವೆ ಎಂದು ಹೇಳಿದ್ದಾರೆ.








